ಸ್ಟೇಟಸ್ ಕತೆಗಳು (ಭಾಗ ೨೩೮) - ಮಣ್ಣಿನ ಪಾತ್ರೆ

ಶಾಲೆಯ ಅಂಗಳದಲ್ಲಿ ಅನಗತ್ಯ ಜಗಳ, ಸಿಟ್ಟಿನಲ್ಲಿ ನಿತಿನ್ ಬರುವುದನ್ನು ಅವನಪ್ಪ ನೋಡಿದ್ರು. ನಿತಿನ್ ಗೆ ಏನು ಅನ್ನದೆ ಮನೆಗೆ ಬಂದು, ಮನೆಯಲ್ಲಿ ಅಡುಗೆ ಮನೆಯಲ್ಲಿ ಬಳಸುವ ಅಷ್ಟೂ ಅಲುಮಿನಿಯಂ ಬೆಳ್ಳಿಯ ಪಾತ್ರೆಗಳನ್ನು ಮಾರಾಟ ಮಾಡಿ ಎಲ್ಲವನ್ನು ಮಾರಿ ಬಂದು ಎಲ್ಲವನ್ನು ಮಣ್ಣಿನ ಪಾತ್ರೆಗೆ ವರ್ಗಾಯಿಸಿದರು. ನನಗರ್ಥವಾಗಲಿಲ್ಲ ಹೆಚ್ಚು ದುಡ್ಡು ಕೊಟ್ಟು ಇದನ್ನೇಕೆ ಖರಿದಿಸುವ ಅವಶ್ಯಕತೆ ಇತ್ತು ಅಂತ ಕೇಳಿದ್ದಕ್ಕೆ ಹೇಳಿದರು. ಸದ್ಯದ ಸ್ಥಿತಿಗತಿಯಲ್ಲಿ ನಾವು ಬದುಕೋಕೆ ತಾಳ್ಮೆ ತುಂಬಾ ಅಗತ್ಯ.
ಅದು ಇಲ್ದಿದ್ರೆ ಗುರಿಯನ್ನು ಸುಲಭವಾಗಿ ತಲುಪಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮನೆಯೊಳಗೆ ಬೆಳೆಸುವ ಮಣ್ಣಿನ ಎಲ್ಲ ಪಾತ್ರಗಳು ನಮ್ಮೊಳಗೆ ಆರೋಗ್ಯವನ್ನು ವೃದ್ಧಿಸುತ್ತವೆ ಜೊತೆಗೆ ನಾವು ಪಾತ್ರೆಯನ್ನು ಬಳಸುವ ವಿಧಾನದಿಂದ ಅದು ಹೆಚ್ಚು ಬಾಳಿಕೆ ಬರುತ್ತದೆ ಆಗ ನಮ್ಮೊಳಗೆ ತಾಳ್ಮೆ ಇರುತ್ತದೆ ಸಂಯಮವಿರುತ್ತದೆ ಜೊತೆಗೆ ಸಮಯ ಕೂಡ. ನಾವು ಯಾರು ಏನೂ ಕಳೆದುಕೊಳ್ಳೋಕೆ ತಯಾರಿಲ್ಲ. ಪಡೆದುಕೊಳ್ಳೋಕೆ ಉತ್ಸುಕರಾಗಿದ್ದೇವೆ. ಹಾಗಾಗಿ ಸದ್ಯ ಕಳೆದುಕೊಂಡಿರುವ ಮೌಲ್ಯಗಳು ಬಳಿಗೆ ಬಂದರೆ ಅಷ್ಟೂ ಅಲ್ಯೂಮಿನಿಯಂ ಪಾತ್ರೆಗಳನ್ನು ಮನೆಯೊಳಗೆ ಬರಬಹುದು ಇಲ್ಲ ಎಲ್ಲ ಮನೆಗಳಲ್ಲೂ ಹೀಗೆ ಆಗಬೇಕು. ಮಾತು ಕೇಳದವರು ಕೇಳಿಸುವಂತೆ ಮಾಡಿ ಅವರು ಮಾದರಿಯಾಗಬೇಕು ಮಣ್ಣಿನ ಪಾತ್ರೆ ಮನೆಯೊಳಗೆ ಆಗಮಿಸಿದಾಗ ಅದನ್ನು ತೊಳಿಯುವುದರಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತಾ ಇದ್ರು. ಅದು ನಮ್ಮ ಜೀವನದಲ್ಲೂ ಘಟಿಸಲಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ