ಸ್ಟೇಟಸ್ ಕತೆಗಳು (ಭಾಗ ೨೪೨) - ಕಾರಣ
ಸಂಪಾದನೆ ಹೆಚ್ಚಾಗುತ್ತಿದೆ ದಿನಕಳೆದಂತೆ ಲಾಭದ ಪ್ರಮಾಣ ಹೆಚ್ಚಾಯಿತು. ಮನೆಗಳು ದೊಡ್ಡದಾಗಿವೆ, ಗಾಡಿಗಳು ಹೊಸತಾಗಿದೆ, ಮುಂದೇನು? ಅನ್ನುವ ಪ್ರಶ್ನೆ ಎದುರಾದಾಗ ಕೈಹಿಡಿದ ಹೊಸ ಉದ್ಯಮವೇ ಸಿ ಮಾರ್ಟ್. ಹಿಂದೆ ಹೇಳಿದ್ದೆಲ್ಲಾ ಇವರ ಕತೆ. ಇದೇ ಉದ್ಯಮ ಇದನ್ನು ಭಾರತದ ನಾನಾ ಭಾಗದಲ್ಲಿ ಆರಂಭವಾದವು. ಅದಕ್ಕಾಗಿಯೇ ಯಾಕೆಂದರೆ ಇದರ ಹಿಂದೆ ದೊರಕಿದ ಎಲ್ಲ ಜಾಗಗಳು ಪೇಟೆಯಿಂದ ಒಂದು ಕಿಲೋಮೀಟರ್ ದೂರ. ಯಾಕೆಂದರೆ ಈ ಪೇಟೆಯೊಳಗೆ ಒಡಾಟ ಹೆಚ್ಚಾಗುತ್ತದೆ. ಅಕ್ಸಿಡೆಂಟ್ ಗಳು ಆರಂಭವಾಗಿದೆ, ಸಾವುಗಳು ಹೆಚ್ಚುತ್ತಿವೆ. ಸರಕಾರ ಕೊಡುವುದಿಲ್ಲ ಅಂದ ಜಾಗಕ್ಕೆ ಅನುಮತಿ ದೊರಕ್ಕಿದ್ದು ಪೇಟೆಯೊಳಗಿನ ಜಾಗವನ್ನು ಯಾರಿಗೂ ನೀಡದೆ ಸರಕಾರ ಊರಿನ ಹೊರಗೆ ಸಂಸ್ಥೆ ನಿರ್ಮಿಸಲು ಅನುಮತಿ ನೀಡಿತು. ಜನ ಬಂದರು, ದುಡ್ಡು ಹೆಚ್ಚಾಯಿತು. ರಸ್ತೆ ಗಂಟೆಗೆ 4 ಸಲ ಓಡಾಟಕ್ಕೆ ತೊಂದರೆ ಕೊಟ್ಟಿತು.
ಸರಕಾರದ ನಿರ್ಧಾರವನ್ನು ಊರು ವಿರೋಧಿಸಿತು, ವ್ಯಕ್ತಿಗಳು ವಿರೋಧಿಸಿದರು. ಅಲ್ಲಿ ಒಂದಷ್ಟು ಲಂಚಗಳು ಕೈ ತುಂಬಿದಾಗ ಸರಕಾರವೇ ಸಂಸ್ಥೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿತು. ಜನರೆಷ್ಟೇ ಬೇಡಿದರೂ ಮಾಲೀಕನ ಉತ್ತರವಿಲ್ಲ. ಆ ದಿನ ಮಾಲಿಕನ ಮಗಳಿಗೆ ಉಸಿರಾಟದ ತೊಂದರೆ ಆರಂಭವಾಯಿತು. ಆಂಬುಲೆನ್ಸು ಮನೆ ತಲುಪಿತು ಆದರೆ ಆಸ್ಪತ್ರೆ ತಲುಪೋಕೆ ರಸ್ತೆಯಲ್ಲಾ ಜನಜಂಗುಳಿ ಓಡಾಟಕ್ಕೆ ಸ್ಥಳವಿಲ್ಲ. ಮುಖ್ಯ ಕಾರಣ ಸಿ-ಮಾರ್ಟ್. ಮಗಳ ಉಸುರು ನಿಂತಿತು. ದುಡ್ಡು ಮಗಳನ್ನ ದೂರ ಮಾಡಿತು. ಅರಿವಾದಾಗ ಕಾಲಮಿಂಚಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ