ಸ್ಟೇಟಸ್ ಕತೆಗಳು (ಭಾಗ ೨೫೩) - ಊಹೆ

ಸ್ಟೇಟಸ್ ಕತೆಗಳು (ಭಾಗ ೨೫೩) - ಊಹೆ

ಅದೊಂದು ದೊಡ್ಡ ಊರು. ವ್ಯಾಪಾರ ಅಲ್ಲಿರುವವರ ಹೆಚ್ಚಿನ ಬದುಕು. ಆದರೆ ಬದುಕು ಇನ್ನಷ್ಟು ಐಷಾರಾಮ ಆಗಲು ಇಬ್ಬರು ವ್ಯಾಪಾರಿಗಳು ಯೋಚಿಸಿದರು. ಒಬ್ಬ ಗೃಹ ಮಂತ್ರಿಗಳ ಬಳಿ ತೆರಳಿದ, ಇನ್ನೊಬ್ಬ ಆರೋಗ್ಯ ಮಂತ್ರಿ ಬಳಿ ತೆರಳಿದ. ಮರುದಿನ ಗೃಹ ಮಂತ್ರಿ ನಿಯಮವೊಂದನ್ನು ಜಾರಿಗೆ ತಂದರು. ನಾಳೆಯಿಂದ ಎಲ್ಲಾ ದ್ವಿಚಕ್ರ ಚಲಾಯಿಸುವವರು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದಕ್ಕಿಂತ ಮೊದಲು ಊರಲ್ಲಿ ಆ ನಿಯಮ ಇರಲಿಲ್ಲ. ವ್ಯಾಪಾರಿಯ ಹೆಲ್ಮೆಟ್ ವ್ಯಾಪಾರ ಹೆಚ್ಚಾಯಿತು. 

ಆರೋಗ್ಯ ಮಂತ್ರಿ ಪತ್ರಿಕಾ ಗೋಷ್ಠಿ ಕರೆದು ಹೊಸ ರೋಗವೊಂದನ್ನು ಹೆಸರಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸೋಕೆ ಆಜ್ಞೆ ಹೊರಡಿಸಿದರು. ಎರಡನೇ ವ್ಯಾಪಾರಿಯ ಬ್ಯಾಂಕ್ ತುಂಬಿತು. ಕೆಲವೊಮ್ಮೆ ರೋಗವೇ ಸೃಷ್ಟಿ ಆಗಬೇಕೆಂದಿಲ್ಲ ಸುದ್ದಿ ಪ್ರಚಾರವಾದರೂ ವ್ಯಾಪಾರ ಲಾಭವಿದೆ ಅಂತೆ, ಅನ್ನೋದು ಒಂದು ಊಹೆ ನಿಜವೋ ಸುಳ್ಳೋ ಗೊತ್ತಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ