ಸ್ಟೇಟಸ್ ಕತೆಗಳು (ಭಾಗ ೨೫೫) - ಬಾಟಲ್

ಸ್ಟೇಟಸ್ ಕತೆಗಳು (ಭಾಗ ೨೫೫) - ಬಾಟಲ್

ನಿನಗೆ ಅರ್ಥ ಆಗೋದಿಲ್ಲವಾ? ಬಾಯಾರಿ ಗಂಟಲೊಣಗಿ ಕುಡಿಯೋಕೆ ಏನಾದರೂ ಬೇಕು ಎಂದು ಕೇಳಲು ಸಾಧ್ಯವಾಗದಿರುವಷ್ಟು ಪರಿಸ್ಥಿತಿ ಬಿಗಡಾಯಿಸಿದಾಗ, ಅಂಗಡಿಗೆ ತೆರಳಿ ದುಡ್ಡುಕೊಟ್ಟು ಬಾಟಲ್  ಖರೀದಿಸುತ್ತೀಯಾ? ಅಂದರೆ ನೀರು ಖರೀದಿಸುತ್ತೀಯಾ. ಅಂದುಕೊಂಡಿದ್ದೀಯಾ ..ನೀರನ್ನು ಯಾರು ಬಾಟಲಿ ಉತ್ಪತ್ತಿಮಾಡುತ್ತಾನೋ ಅವನೇ ಉತ್ಪಾದನೆ ಮಾಡುತ್ತಿದ್ದಾನೆ ಅಂತ. ಅವನು ತಯಾರಿಸುತ್ತಿರುವುದು ಬರಿಯ ಬಾಟಲ್ ಮಾತ್ರ. ಅದರೊಳಗೆ ತುಂಬುವ ನೀರು ನಿನ್ನ ನೆಲದ್ದು.‌ ನೆಲವನ್ನು ಒಣಗಿಸುತ್ತಿರುವುದು ಆತ. ನಿನಗೇಕೆ ಅರಿವಾಗುತ್ತಿಲ್ಲ. ಆತನ ಜೇಬು ತುಂಬುತ್ತಿದೆ ನೆಲದೊಡಲು ಖಾಲಿಯಾಗುತ್ತಿದೆ. ಕುಡಿದಾದ ಮೇಲೆ ಖಾಲಿಯಾಗಿ ಬಿದ್ದಿರುವ ಬಾಟಲಿಗಳು ಮತ್ತೆ ನೆಲದೊಳಕ್ಕೆ ಸೇರಿ ನೀರನ್ನು ಇಂಗದ ಹಾಗೆಯೂ ಮಾಡುತ್ತಿದೆ. ಹೀಗಿರುವಾಗ ನಿನಗೇಕೆ ಇದು ಘೋರ ಪರಿಣಾಮ ಉಂಟುಮಾಡುವ ಸನ್ನಿವೇಶ ಅಂತ ಅನಿಸಿಲ್ಲ. ನನ್ನ ಪ್ರಕಾರ ನೀನು ಗಮನಿಸಿಲ್ಲ ಅಂತ ಕಾಣುತ್ತೆ. ಒಡಲೊಳಗಿನ ನೋವುಗಳನ್ನ ಒಳಗೊಳಗೆ ಸಹಿಸಿಕೊಂಡರೆ ಪರಿಣಾಮ ಹೊರಗೆ ಗೊತ್ತಾಗುವುದಿಲ್ಲ. ಹಾಗಾಗಿ ಕಣ್ಣು ಬಿಟ್ಟು ನೋಡು ಹೊಸ ಜಗತ್ತೇ ಕಾಣಬಹುದು ಅಥವಾ ಕುಂದುಕೊರತೆ ಲೋಪದೋಷಗಳು ಇರುವ ಜಗತ್ತಾದರೂ ಕಾಣಬಹುದು. ಕಾಣದೇ ಹೋಗಲು ಸಾಧ್ಯವಿಲ್ಲ ನೀ ತೆರೆಯ ಬೇಕಿದೆ ನಿನ್ನ ಅಂತರಂಗದ ಕಣ್ಣು. ಒಡಲು ಖಾಲಿಯಾಗುವ ಮುನ್ನ ತುಂಬಿಸಬೇಕಿದ್ದ ಅರಿವಿರಲಿ ಒಡಲ. ಭೂಮಿ ಒಂದೇ ಇರೋದು…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ