ಸ್ಟೇಟಸ್ ಕತೆಗಳು (ಭಾಗ ೨೫೬) - ವಿಳಾಸವಿಲ್ಲದ ಗೆಳೆಯರು

ಸ್ಟೇಟಸ್ ಕತೆಗಳು (ಭಾಗ ೨೫೬) - ವಿಳಾಸವಿಲ್ಲದ ಗೆಳೆಯರು

ನೀವು ಅಂದುಕೊಂಡಿರಬಹುದು ಇವನು ಸಾಮಾನ್ಯ ಅಂತ. ನನ್ನ ತಾಕತ್ತು ನಿಮಗೆ ಗೊತ್ತಿಲ್ಲ. ಅವತ್ತು ಮಧ್ಯಾಹ್ನ ಏನು ಕೆಲಸ ಇಲ್ಲ ಅಂದು ಅರಾಮವಾಗೇ ಇದ್ದೆ. ಆಗ ನಮ್ಮ ಮನೆಯವರೇ ಆದ ಜಿರಳೆ, ಹಲ್ಲಿ, ಇಲಿ ಇವರ ಇನ್ವಿಟೇಷನ್ ಸಿಕ್ಕಿತು." ಸರ್ ನಮಸ್ತೆ ನಮ್ಮ ಪರಿಚಯ ನಿಮಗಿದೆ ಆದರೆ ನಮ್ಮ ಸಮಾಜದ ಪರಿಚಯ ನಿಮಗೆ ಇಲ್ಲ. ದಯವಿಟ್ಟು ಈ ಜನರಿಗೆ ಒಂದಷ್ಟು ಅದರ ಬಗ್ಗೆ ತಿಳಿಸಿ ಕೊಡಿ ಅಂತ ಕೇಳಿಕೊಂಡು ಬಂದಿದ್ದೇವೆ".  ಗೊತ್ತಿಲ್ಲದೆ ಇರೋರಿಗೆ ಒಂದು ವಿಚಾರವನ್ನ ದಾಟಿಸುವುದು ನನ್ನ ಮುಖ್ಯ ಧ್ಯೇಯ ಅಂದುಕೊಂಡು ಅವರ ಕಾರ್ಯಕ್ರಮಗಳಿಗೆ ತೆರಳಿದೆ. ಆಗ ಕಂಡದ್ದೇನು ಹೊಸ ಸಮಾಜ ಜಿರಳೆಗಳ ಸಮಾಜದಲ್ಲಿ ಎಲೆಕ್ಷನ್ ಆಗುತ್ತೆ, ವೋಟಿಂಗ್ ನಿಲ್ತಾರೆ, ಅವರದೇ ಒಂದು ಶಾಲೆಯಲ್ಲಿ ಪಾಠ ಮಾಡೋರಿಗೆ ಸಾಮಾಜಿಕ ಜ್ಞಾನವೇ ತುಂಬಾ ಮುಖ್ಯ. ಓದಿಕೊಂಡಿರಬೇಕು ಜ್ಞಾನಕ್ಕೆ ಹೆಚ್ಚಿನ ಗೌರವ ಇಲ್ಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ .

ಈ ಹಲ್ಲಿಗಳಲ್ಲಿ ಅವರಿಗೆ ಪ್ರ್ಯಾಕ್ಟಿಕಲ್ ಕ್ಲಾಸುಗಳು ಹೆಚ್ಚು, ಆ ದಿನದಲ್ಲಿ ಹೀಗೆ ಬದುಕಬೇಕು ಅನ್ನೋದನ್ನ ಅಲ್ಲಿ ತಿಳಿಸಿಕೊಡುತ್ತಾರೆ. ಇನ್ನೊಂದು ಗ್ರಾಮ ಪಂಚಾಯಿತಿ ಇದೆ, ಮುಖ್ಯಸ್ಥ, ವಿರೋಧಪಕ್ಷಗಳು,ಹೀಗಿದೆ ಅವರ ಸಮಾಜ . ಇಲಿಗಳ ಸಮಾಜದ ಕಡೆಗೆ ಹೋದರೆ ಅವರದೇ ಆದ ಆರಾಧನಾ ಸ್ಥಳಗಳಿದ್ದಾವೆ. ಆಟ ಆಡೋಕೆ ಪಾರ್ಕುಗಳಿದ್ದಾವೆ, ಮೈದಾನಗಳಿವೆ, ಸುದ್ದಿ ತಿಳಿಸೋಕೆ ಮಾಧ್ಯಮಗಳಿವೆ. ಭಾಗವಹಿಸಿದವರಿಗೆ ಅಭಿನಂದನಾ ಸಮಾರಂಭವಿತ್ತು. ಹಾಗಾಗಿ ನಾನು ಅಲ್ಲಿ ಹೋಗಬೇಕಾಗಿ ಬಂತು. ಅವರ ಮಾತುಗಳು ನನಗೆ ಸುಲಭಕ್ಕೆ ಅರ್ಥ ಆಗಲಿಲ್ಲ ಆದರೆ ಭಾವ ತಿಳಿಯಿತು 

ಕಾರ್ಯಕ್ರಮ ಮುಗಿಸಿ ಊಟ ಮಾಡಿ ಹೊರಬರುವಾಗ ಜೋರು ಸ್ವರ ಕೇಳಿ ಬಂತು. 

"ತಲೆದಿಂಬು ಕಚ್ಚಿದ್ದು. ಸಾಕು ಗಂಟೆ ಎಂಟಾಯಿತು ಏಳು"

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ