ಸ್ಟೇಟಸ್ ಕತೆಗಳು (ಭಾಗ ೨೫೮) - ಸಾವಿನ ನಿಲ್ದಾಣ

ಸ್ಟೇಟಸ್ ಕತೆಗಳು (ಭಾಗ ೨೫೮) - ಸಾವಿನ ನಿಲ್ದಾಣ

ಈ ನಿಲ್ದಾಣದಲ್ಲಿ ಬಂದು ನಿಲ್ಲೋಕೆ ಯಾರಿಗೂ ಇಷ್ಟವಿರುವುದಿಲ್ಲ. ನಾವು ಆ ನಿಲ್ದಾಣದಿಂದ ದೂರ ಚಲಿಸುವ ಅಥವಾ ಹತ್ತಿರವಾಗುವ ಸ್ಥಳದಲ್ಲಿ ನಿಂತು ಈ ನಿಲ್ದಾಣದ ಅವಶ್ಯಕತೆ ಇದೆಯೋ ಇಲ್ಲವೋ ಅನ್ನುವುದನ್ನು ಚಿಂತಿಸುವ. ನಿಲ್ದಾಣದ ಕದತಟ್ಟಿದ ಕೂಡಲೇ, ಬಾಗಿಲ ಮುಂದೆ ಕಣ್ಣೀರಿಡುವ ಮುಖಗಳು ಸಾಲಾಗಿ ನಿಂತಿರುತ್ತದೆ. ಅದು ನಿರೀಕ್ಷಿತ ಪ್ರವೇಶವಾದರೆ ಅಷ್ಟೇನೂ ಆತಂಕವಿರಲಿಲ್ಲ ಅನಿರೀಕ್ಷಿತ ಹೆಜ್ಜೆಗಳನ್ನ ಇಟ್ಟಾಗ ಅಲ್ಲಿರುವ ನೋವಿನ ಆಗಸದಲ್ಲಿ ಬಂಧಿಯಾಗುತ್ತಾರೆ. ನೀವೊಮ್ಮೆ ಸಾವಿನ ನಿಲ್ದಾಣವಾದ ಮಸಣಕ್ಕೆ ಭೇಟಿ ನೀಡಲೇಬೇಕು. ಹಲವು ಬೇಕುಗಳು ಬೇಡವಾಗುತ್ತವೆ, ಬೇಡಗಳನ್ನ 

ಒಟ್ಟಿಗೆ ಜೊತೆಗೂಡಿಸಿ ನಡೆಯೋಣ ಎಂದೆನಿಸುತ್ತದೆ. ಆಸ್ಪತ್ರೆಗೆ ತಲುಪುವ ದೇಹ-ಮನಸ್ಸುಗಳು ಆಂಬುಲೆನ್ಸ್ ಗಾಡಿಗೆ ಒರಗಿರುತ್ತದೆ .ಜೀವದ ವಸ್ತುಗಳ ಅರಿವಾಗುವುದಿಲ್ಲ, ಬದುಕು-ಸಾವುಗಳ ಕಂಪನ ತಿಳಿಯುವುದಿಲ್ಲ, ಮನುಜ ಜೀವ, ಸಾವು ಮುರಿತ, ಓಟ ಇತ್ಯಾದಿ ಯಾವುದನ್ನಾದರೂ ಸಾಗಿಸೋಕೆ ಮಾತ್ರ ಬಳಕೆಯಾಗುತ್ತದೆ, ಅದು ಕೂಡ ಸಾವಿನಿಂದ ಅನುಭವಿಸಿರುವುದು. 

ಈ ಭೂಮಿಯ ಸಾವಿನ ನಿಲ್ದಾಣದಲ್ಲಿ ಸ್ಥಾಯಿಯಾಗಿರುವ, ಹೂತಿಟ್ಟ ನಿಲ್ದಾಣದ ಗೋರಿಯೊಳಗೆ ಆಸೆಗಳು ಕನಸುಗಳು ನೋವುಗಳು ಭವಿಷ್ಯದ ಮಾತುಗಳು ಒಳಗಿರುತ್ತವೆ. ಗೆಲುವು ಸಣ್ಣಗಿರುತ್ತದೆ ಈ ಸಾವಿನ ನಿಲ್ದಾಣವಲ್ಲ ಬೇಡ ಯಾರನ್ನು ತಳ್ಳುವುದು ಬೇಡ. ನಿಲ್ದಾಣದಿಂದ ದೂರ ಚಲಿಸುವ ಮಾರ್ಗ ಕಂಡುಹಿಡಿದು ಸಾಗುವುದು ಒಳಿತು ಆ ನಿಲ್ದಾಣವಿದೆ ಅನ್ನುವುದರ ಎಚ್ಚರದ ಅಗತ್ಯವಿದೆ ಎಂದೆನಿಸುತ್ತದೆ. 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ