ಸ್ಟೇಟಸ್ ಕತೆಗಳು (ಭಾಗ ೨೫) - ನಗು

ಸ್ಟೇಟಸ್ ಕತೆಗಳು (ಭಾಗ ೨೫) - ನಗು

ತೊಟ್ಟಿಲಿನ ಮಗುವಿಗೆ ಕಲಿಸಿದವರಾರು? ಗೆಳೆಯರು, ಶಿಕ್ಷಕರು, ಹೆತ್ತವರು, ಬಂಧು-ಬಳಗ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಾರೆ. ಆದರೆ ತೊಟ್ಟಿಲಿನಲ್ಲಿ ಮಲಗಿರುವ ಹಸುಗೂಸಿಗೆ ನಗುವುದನ್ನ ಹೇಳಿಕೊಟ್ಟವರಾರು? ಹಸಿವಾದರೆ, ಅಮ್ಮನ ಅಪ್ಪುಗೆ ಬೇಕೆಂದರೆ, ಸೊಳ್ಳೆ ಏನಾದರೂ ಕಚ್ಚಿದರೆ ಮಗು ಅಳಬಹುದು. ಆದರೆ ನಗುವಿಗೆ ಕಾರಣವೇನು? ಮಗು ಏಕಾಂತವಾಗಿರುವಾಗ ಹಾಲುಗಲ್ಲವನ್ನು ಅರಳಿ ತುಟಿ ಬಿರಿದು ನಗುತ್ತದಲ್ಲ, ಅದನ್ನು ಕಲಿಸಿದವರಾರು?. ನನ್ನ ಪ್ರಕಾರ ನಮ್ಮೊಂದಿಗೆ ಹುಟ್ಟಿನಿಂದ ಬಂದಿರುವುದು ನಗು. ನಾವು ಅಳವಡಿಸಿಕೊಂಡಿರುವುದು ನೋವು, ಯಾತನೆ, ಮುಂತಾದ ಉಳಿದವುಗಳನ್ನ. ಆದರೆ ಪ್ರಸ್ತುತ ಅಳವಡಿಸಿಕೊಂಡದ್ದನ್ನ ಜೊತೆಗಾರರನ್ನಾಗಿ, ಮಾಡಿಕೊಂಡು ಹುಟ್ಟಿನಿಂದ ಬಂದದ್ದನ್ನ  ಮರೆತಿದ್ದೇವೆ ಅನ್ನಿಸುತ್ತಿದೆ. ಮಗುವಿನ ನಗುವೆಂತಹುದು ಎಂದರೆ ಮೋಡದ ಮರೆಯಿಂದ ಇಣುಕುವ ಚಂದಿರನ ಹಾಗೆ, ಮೊಗ್ಗಿನ ಮೇಲೆ ಸೂರ್ಯನ ಕಿರಣ ಬಿದ್ದಾಗ ಮೊಗ್ಗು ಅರಳುವ ಹಾಗೆ, ಕಪಟ ಮೋಸವಿಲ್ಲದ ಸಾಧಾರಣ ನಗು. ನನ್ನ ಹುಟ್ಟಿನಿಂದ ಜೊತೆಗಿರುವ ನಗುವನ್ನ ಜೊತೆಗಾರನನ್ನಾಗಿ ಮಾಡಿಕೊಳ್ಳಬೇಕಿದೆ, ಅಳವಡಿಸಿಕೊಂಡದನ್ನ ಒಂದಷ್ಟು ದೂರ ತಳ್ಳಬೇಕಿದೆ. ಇದು ನನ್ನ ಸ್ವಂತ ನಿರ್ಧಾರ ಮಾತ್ರ....

-ಧೀರಜ್ ಬೆಳ್ಳಾರೆ 

ಚಿತ್ರ ಕೃಪೆ: ಇಂಟರ್ನೆಟ್ ತಾಣ