ಸ್ಟೇಟಸ್ ಕತೆಗಳು (ಭಾಗ ೨೬೯) - ಕೊನೆಯ ಮಾತು

ಸ್ಟೇಟಸ್ ಕತೆಗಳು (ಭಾಗ ೨೬೯) - ಕೊನೆಯ ಮಾತು

ತಿಂಗಳು ಒಂದಾಗಿರಬಹುದು ಅಜ್ಜಾ ಮಾತು ನಿಲ್ಲಿಸಿ. ಆದರೆ ಅವತ್ತು ಮನಸ್ಸು ಮಾಡಿದ್ದರು ಮಾತಾಡೋಕೆ. ಮಲಗಿದ್ದಲ್ಲೇ ತುಟಿಗಳು ಅಲುಗಿದವು." ನೋವು ನುಂಗಬೇಕು ಬಾಬು , ನುಂಗಬೇಕು ಅಂತ ಅಂದ್ರೆ ಅನುಭವಿಸಬೇಕು. ಅನುಭವಿಸಿದಾಗ ಚೂರು ಉಸಿರು ಹೊರ ಚೆಲ್ಲಬಹುದು. ಆದರೆ ಪರಿಹಾರ ಎಲ್ಲಾ ನೋವುಗಳಿಗೆ ಸಿಗೋದಿಲ್ಲ. ಹಾಗಾಗಿ ನೋವನ್ನ ಹೊಟ್ಟೆಗೆ ಹಾಕಿಕೊಳ್ಳಿ ಅಂತ ದೊಡ್ಡವರು ಹೇಳಿದ್ದು. ಹೊಟ್ಟೆ ಜೀರ್ಣ ಮಾಡಿಕೊಳ್ಳುತ್ತೆ. ಅಲ್ಲಿಯೇ ನೋವು ಕೂಡಾ ಜೀರ್ಣ ಆಗಬೇಕು. ನಿನಗೆ ತಿಳಿಯದೆ ಇರುವ ಸತ್ಯಗಳು ತಿಳಿಯುವಾಗ ನೋವಾಗುತ್ತೆ .ಅದಕ್ಕೆ ಪರಿಹಾರ ಇರೋದಿಲ್ಲ. ನುಂಗಬೇಕು ಮುಂದುವರಿಯಬೇಕು .ತಪ್ಪುಗಳು ಘಟಿಸಿವೆ, ಪರಿಸ್ಥಿತಿಯನ್ನು ಅರ್ಥೈಸಿಕೋ" 

ಅಜ್ಜನ ದೇಹದ ಒಳಗೆ ಉಸಿರು ಹೋಗಲು ಪರದಾಡುತ್ತಿತ್ತು. ಕೆಲಕ್ಷಣಗಳಲ್ಲಿ ಉಸಿರುಗಳ ಓಡಾಟ ನಿಂತುಹೋಯಿತು. ತಂಪಾಯಿತು ದೇಹ. ಮತ್ತೆ ಮಾತನಾಡೋಣ ಅಂದ್ರು ಅಜ್ಜ ಮಾತು ನಿಲ್ಲಿಸಿದ್ದರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ