ಸ್ಟೇಟಸ್ ಕತೆಗಳು (ಭಾಗ ೨೮೦) - ಭಗವಂತನಿಗೆ ಕರೆ
ನೀನೊಂತರ ವಿಚಿತ್ರ ಮಾರಾಯ ಕೇಳದ್ದನ್ನೆಲ್ಲ ಕೊಡ್ತಾ ಇದ್ದೀಯಾ, ಕೇಳಿದ್ದು ಬರೋದೇ ಇಲ್ಲ. ಕೇಳದೆ ಕರ್ಕೊಂಡು ಹೋಗಿ ಬಿಡ್ತೀಯ, ಹೋಗಲೇ ಬೇಕಾದವರಿಗೆ ನೀನು ದಿನವೇ ಕೊಡುವುದಿಲ್ಲ. ನಿನ್ನ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅದೇನು ಹಣೆಬರಹವನ್ನು ನೀನೇ ಬರದದಂತೆ. ಹೀಗಾಗಬೇಕು ಅಂತ ಬರೆಯೋದು ನೀನೇ, ಕಳಿಸುವುದು ನೀನೇ, ಕರ್ಕೊಂಡು ಹೋಗೋದು ನೀನೇ, ಎಲ್ಲವೂ ನೀನೆ ಮಾಡುತ್ತಿರುವಾಗ ನಾವಿಲ್ಲಿ ಬರೀ ಗೊಂಬೆಗಳನ್ನು ಅನ್ನಿಸ್ತಾ ಇದೆ. ಚರ್ಮದೊಳಗೆ ರಕ್ತ ಮಾಂಸ ಮೂಳೆಗಳನ್ನು ತುಂಬಿಸಿ, ನೀನು ಸೂತ್ರವನ್ನು ಹಿಡಿದು ನಮ್ಮನ್ನು ಆಡಿಸುತ್ತಾ ಇದ್ಯಾ .ನಮಗೆ ಅರ್ಥ ಆಗ್ತಾ ಇಲ್ಲ. ನಮ್ಮದೇ ಬದುಕು ನಮಗೆ ಇಷ್ಟ ಬಂದಾಗ ಬದುಕುತ್ತೇವೆ ಯಾವನು ಕೇಳೋಣು ? ಹೀಗೆ ನಮ್ಮ ಯೋಚನೆಗಳು ಮೂಡಿದಾಗ ಕೆಲವೊಂದ್ಸಲ ನೀನು "ಮಗನೆ ಬಾರಿ ಹಾರಾಡುತ್ತಿಯಲ್ಲಾ, ಹೋಗಿ ಬಿಡು ಅಂತ ಆಡಿಸುತ್ತಿರು ಹಗ್ಗನೇ ಕಟ್ ಮಾಡ್ಬಿಡ್ತೀಯಾ. ಮುಂದೆ ಹೋಗೋದೆಲ್ಲಿಗೆ. ಯಾವ ಕ್ಷಣದಲ್ಲಿ ಯಾವನ ಕರೆ ಬರುತ್ತೋ, ಯಾವ ಕೈಯಲ್ಲಿ ಏನು ಮಾತಾಡಲಿ ಅಂತ ಅರಿವಿಲ್ಲದೆ ಮರಣವನ್ನು ಹೊಂದಿ ಬಿಡುತ್ತೇನೆ. ನಿನ್ನನ್ನ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಪಡುವುದಕ್ಕಿಂತ ನಿನ್ನನ್ನು ಪ್ರೀತಿಸಿ ನೀನು ಅಂದಂತೆ ಬದುಕುವುದು ಮೇಲು ಅಂತ ನಿರ್ಧಾರ ಮಾಡಿಬಿಟ್ಟಿದ್ದೇನೆ. ಇದಕ್ಕೆ ನೀನು ಹೇಳುತ್ತೀಯಾ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ