ಸ್ಟೇಟಸ್ ಕತೆಗಳು (ಭಾಗ ೨೮೬) - ತಪ್ಪಿದ ಮಗು

ಸ್ಟೇಟಸ್ ಕತೆಗಳು (ಭಾಗ ೨೮೬) - ತಪ್ಪಿದ ಮಗು

ಮತ್ತೆ ಮತ್ತೆ ಕಾಡುತ್ತಿದೆ, ನಿದ್ದೆ ಬಾರದೆ ಮನ ತೊಳಲಾಡುತಿದೆ. ಮನದೊಳಗೆ ಪ್ರಶ್ನೆಗಳೇ ಮೂಡುತಿದೆ. ಕಣ್ಣು ತೆರೆಯಲಾಗದ ಆ ಪುಟ್ಟ ದೇಹದ ಯಾತನೆ ಹೇಗಿರಬಹುದು?  ಅಂತ. ಸಂಜೆ 4 ದಾಟಿತ್ತು ಕಾಲೇಜಿನ ಕಾರಿಡಾರ್  ಬಳಿ ಹುಟ್ಟಿ ಕೆಲವು ದಿನಗಳಾಗಿರಬಹುದೇನೋ ಪುಟ್ಟ ಇಲಿ ಮರಿಯೊಂದು ನೆಲದಲ್ಲಿ ಬಿದ್ದಿತ್ತು. ಸುತ್ತಮುತ್ತಲೆಲ್ಲೂ ಕೂಡ ಆದರೆ ಕುಟುಂಬ ಸದಸ್ಯರ ಕುರುಹೇ ಸಿಗುತ್ತಿಲ್ಲ. ಇಲ್ಲಿಗೆ ತಲುಪಿದ್ದು ಹೇಗೆ ಎನ್ನುವುದರ ಯಾವ ಅರಿವು ನನಗೆ ಉಂಟಾಗಲಿಲ್ಲ. ಕೈಯಲ್ಲಿ ಹಿಡಿದಾಗ ಅದಕ್ಕೆ ಯಾವ ಭಾವನೆ ಮೂಡಿತು ಏನೋ, ಪ್ರೀತಿಯಿಂದ ಅಲ್ಲೇ ಬಂದು ಬಂದಿಯಾಯಿತು. ಬೆಚ್ಚಗಿನ ಅನುಭವ ತಾಯಿಯ ಅಪ್ಪುಗೆ ಅದಕ್ಕೆ ಬೇಕಿತ್ತು ಅಂತ ಕಾಣುತ್ತೆ. ಉಸಿರಾಟ ಒಂದನ್ನು ಬಿಟ್ಟರೆ ಬೇರೇನೂ ಪ್ರತಿಕ್ರಿಯಿಸುವ ಅರಿವು  ಅದಕ್ಕಿರಲಿಲ್ಲ, ಮುದ್ದಾಗಿತ್ತು. ಎಲ್ಲೋ ಒಂದು ಕಡೆ ಇಟ್ಟು ತೆರಳುವ ಮನಸ್ಸು  ನನಗಾಗಲಿಲ್ಲ. ತಾಯಿಯ ಬಳಿಗೆ ಸೇರಿಸಬೇಕಿತ್ತು. ಹಾಗಾಗಿ ಹುಡುಕಾಟ ಆರಂಭಿಸಿದೆ. ಕಾಲೇಜನ್ನು ನಾಲ್ಕು ಬಾರಿ ಏರಿ ಇಳಿದರೂ ಕೂಡ ಎಲ್ಲಿಯೂ ಇದರ ತಾಯಿಯ ದರ್ಶನವಾಗಲಿಲ್ಲ. ಜಾತ್ರೆಯ ಮಧ್ಯದಲ್ಲಿ ಕಳೆದುಹೋದ ಮಗುವಾದರೂ ಊರಿನಿಂದ ಯಾರನ್ನಾದರೂ ಕೇಳಿ, ಅಥವಾ ಅದರ ಭಾವಚಿತ್ರವನ್ನು ಆದರೂ ಎಲ್ಲಾದರೂ ದಾಖಲಿಸಿ ತಾಯಿಯನ್ನು ಹುಡುಕಬಹುದಿತ್ತು. ಆದರೆ ಈ ಮರಿಯ ಭಾವನೆ ಗೊತ್ತಾಗುತ್ತಿಲ್ಲ. ಹುಡುಕುವುದು ಹೇಗೆ ಅನ್ನುವುದರ ಅರಿವು ನನಗಾಗಲಿಲ್ಲ. ಮರಳಬೇಕಿತ್ತು ಹಾಗಾಗಿ ಅದಕ್ಕೊಂದು ಬದುಕುವ ಜಾಗ ನೀಡಬೇಕಿತ್ತು ಕಣ್ಣು ತೆರೆಯದೆ ಜೀವಿಯನ್ನು ಎಲ್ಲಿ ಅಂತ ಬಿಡೋದು. ಕಾಲೇಜಿನ ಹೊರಗಡೆ ಬೆಚ್ಚಗಿನ ತರಗೆಲೆಗಳಿಂದ ಆವರಿಸಿದಾಗ ಜಾಗದಲ್ಲಿ, ಕೆಲವರಲ್ಲಿ ಕೇಳಿದ ಪ್ರಕಾರ ಅಲ್ಲೊಂದಷ್ಟು ಇಲಿಗಳು ಓಡಾಡಬಹುದು  ಅಂತೆ, ಹಾಗಾಗಿ ನಾಲ್ಕು ಬಾಳೆಹಣ್ಣು, ಒಂದು ಚೂರು ನೀರು ಇಟ್ಟು ಬಿಡಲಾಗದ ಮನಸ್ಸಿನಿಂದ ತಿರುಗಿ ಮನೆಗೆ ಬಂದಿದ್ದೇನೆ. ನಾಳೆ ಮತ್ತೆ ಗಮನಿಸಬೇಕಿದೆ ಏನಾಗಿದೆ  ಅಂತ. ನೋವಿದೆ  ತಾಯಿಯ ಬಳಿಗೆ ಮಗುವನ್ನು ಸೇರಿಸಲಾಗಿಲ್ಲ  ಅನ್ನೋದಕ್ಕೆ. ತಪ್ಪಿದೆಯಾ? ಸರಿಯಿದೆಯಾ? ನನಗನ್ನಿಸಿದ್ದನ್ನು ಮಾಡಿದ್ದೇನೆ.ಮಗು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ : ಇಂಟರ್ನೆಟ್ ತಾಣ