ಸ್ಟೇಟಸ್ ಕತೆಗಳು (ಭಾಗ ೨೮೮) - ಬದುಕೊಂದೇ ಜವಾಬ್ದಾರಿ

ಆಹಾರಕ್ಕಾಗಿ ಆಕಾಶದಲ್ಲಿ ಊರಿಂದೂರಿಗೆ ಆಗಾಗ ಹೋಗ್ತಾ ಇರುತ್ತವೆ. ಒಂದೇ ಕಡೆ ಸಿಗುವುದಾದರೆ ಅಲ್ಲೇ ಯಾವುದು ಮರದಲ್ಲಿ ಕುಳಿತು ಆಹಾರವನ್ನು ತಿಂದು ಬದುಕುತ್ತವೆ. ಇವತ್ತು ಹಾಗೆ ಹೊರಟು ಬಂದವರು ನಾವು. ಎಲ್ಲಾ ಅಂಗಡಿಗಳಿಗೆ ರಜೆ ಇದ್ದು ಕಾರಣ ತಿನ್ನೋಕೆ ಏನೂ ಸಿಗದಿದ್ದಾಗ ಆಕಾಶದಲ್ಲಿ ಹಾರುತ್ತಿದ್ದ ತಮಗೆ ಸುಸ್ತು ಎನ್ನುವುದು ಕಾಡುತ್ತದೆ. ಹಾಗೆ ಸುಸ್ತು ಕಾಡಿದ ತಕ್ಷಣ ಯಾವುದಾದರೂ ಮರದ ರೆಂಬೆಕೊಂಬೆಗಳಲ್ಲಿ ಕುಳಿತುಕೊಳ್ಳುವುದು ನಮ್ಮ ವಾಡಿಕೆ. ಹಾಗೆಯೇ ನಮ್ಮಪ್ಪನ ಜೊತೆಗೆ ನಾವೆಲ್ಲರೂ ಎಲ್ಲಾದರೂ ಕುಳಿತು ಕೊಳ್ಳೋಣ ಅಂತ ಮರಗಳನ್ನು ಹುಡುಕುತ್ತಿದ್ದೆ. ನಮ್ಮಪ್ಪನಿಗೆ ಸುಸ್ತು ಸ್ವಲ್ಪ ಜಾಸ್ತಿ ಆಗಿತ್ತು ಅಂತ ಕಾಣುತ್ತೆ ಹಾಗಾಗಿ ನೇರವಾಗಿ ಹೋಗಿ ಅದ್ಯಾವುದೋ ವಿದ್ಯುತ್ತನ್ನು ಒಂದೂರಿಂದ ಇನ್ನೊಂದೂರಿಗೆ ದಾಟಿಸಿದ ಮತ್ತೊಂದಷ್ಟು ತಂತಿಗಳನ್ನು ತಂತಿ ಮತ್ತು ವಿದ್ಯುತ್ ಕಂಬಕ್ಕೆ ತಂತಿಯನ್ನು ಎಳೆದು ಇರುತ್ತಾರಂತೆ. ಅದರ ಮೇಲೆ ಹೋಗಿ ನಮ್ಮಪ್ಪ ಕುಳಿತುಕೊಂಡ ತಕ್ಷಣ ಅದೇನಾಯಿತೋ ಗೊತ್ತಿಲ್ಲ ಒಂದು ಚೂರು ಶಬ್ದ, ಕ್ಷಣದಲ್ಲಿ ನಮ್ಮಪ್ಪ ಕಂಬದ ಮೇಲೆ ಜೀವವಿಲ್ಲದೆ ನೇತಾಡ್ತಾ ಇದ್ದರೂ ಈ ವಿಚಾರಕ್ಕೆ ನಾವೇನು ಹೋರಾಟ ಮಾಡೋ ಹಾಗಿಲ್ಲ. ಯಾಕೆಂದರೆ ನಾವು ಈ ಸಮಾಜದ ಭಾಗ ಅಂತ ನೀವು ಯಾವತ್ತು ಬಯಸಿಲ್ಲ ಅಂದರೆ ಮನುಷ್ಯರು ಯಾರು ಬಯಸಲಿಲ್ಲ. ಜೋರು ಕೂಗಿದ್ವಿ ನಮ್ಮ ಆರ್ಭಟ ಜಾಸ್ತಿ ಆಯ್ತು. ಏನೇ ಆದರೂ ನನ್ನಪ್ಪ ಬದುಕಿ ಬರಲಿಲ್ಲ ಬದುಕು ಅನಿವಾರ್ಯ ಹೊಟ್ಟೆ ತುಂಬಲೇಬೇಕು, ಇನ್ನು ಎಷ್ಟು ಹೊತ್ತು ಅಂತ ಮರಳಿ ಬಾರದ ನನ್ನಪ್ಪನಿಗೋಸ್ಕರ ಹಾಡುವುದು, ಅಳುವುದು? ಹಾಗಾಗಿ ಕೋಣೆಯಲ್ಲಿರುವ ತಮ್ಮಂದಿರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನಲ್ಲಿದ್ದ ಕಾರಣ ಕೆಲಸದ ಕಡೆಗೆ ಹೆಜ್ಜೆ ಹಾಕಿದೆ. ಬದುಕು ಅಂದುಕೊಂಡಂತೆ ಸಾಗುವುದಿಲ್ಲ ಆದರೆ ಬದುಕುವುದು ನಮ್ಮ ಜವಾಬ್ದಾರಿ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ