ಸ್ಟೇಟಸ್ ಕತೆಗಳು (ಭಾಗ ೨೯೨) - ಬದಲಾಗಿದೆ

ಸ್ಟೇಟಸ್ ಕತೆಗಳು (ಭಾಗ ೨೯೨) - ಬದಲಾಗಿದೆ

ಅವಳಿಗೆ ಕಾರಣ ಗೊತ್ತಾಗ್ತಾ ಇಲ್ಲ. ತನ್ನ ಮನೆಯ ವಾತಾವರಣ ಬದಲಾಗುತ್ತಿದೆ. ಹಿಂದೊಮ್ಮೆ ಅಮ್ಮನಲ್ಲಿ ಊಟ ಸಾಕು ಅಂದಾಗ ಅಮ್ಮ-ಅಪ್ಪ ಇಬ್ಬರೂ ಒತ್ತಾಯದಿಂದ  ಇನ್ನೊಂದಿಷ್ಟು ಊಟ ಮಾಡಿಸ್ತಾ ಇದ್ರು .ಹೊಟ್ಟೆ ತುಂಬ ತಿನ್ನು ಮಗಾ ಅಂತಿದ್ರು. ಆದರೆ ಇತ್ತೀಚಿಗೆ ಊಟ ಸಾಕು ಅಂತ ಅಂದ್ರೆ ಸರಿ ಆಯ್ತು ಬಿಡು ಅಂತಿದ್ದಾರೆ. ಕೋಣೆಯೊಳಗೆ ಹೋದರೆ ಅವರಿಬ್ಬರ ಮಾತುಕತೆಗಳು ತುಂಬ ಜೋರು ಧ್ವನಿಯಲ್ಲಿ ಇರುತ್ತದೆ. ತಾನು ಪ್ರವೇಶಿಸಿದರೆ ಮಾತ್ರ ಪಿಸುದನಿಯ ಇಳಿದುಬಿಡುತ್ತದೆ. ಇಬ್ಬರ ಮುಖದಲ್ಲೂ ನಗುವಿಲ್ಲ. ಪ್ರತಿದಿನವೂ ಜಗಳದಿಂದಲೇ ಆರಂಭ ಅಂತ್ಯವು. ಸಣ್ಣಪುಟ್ಟ ವಿಚಾರಗಳು ಕೂಡ ದೊಡ್ಡಮಟ್ಟದ ಜಗಳವನ್ನು ಹುಟ್ಟಿಸುತ್ತಿದೆ. ಅಪ್ಪ-ಅಮ್ಮ ಮೊದಲಿನಂತಿಲ್ಲ. ಶಾಲೆ ಕರ್ಕೊಂಡು ಹೋಗ್ತಾ ಇದ್ರು, ಬೇಕಾರ ತಿಂಡಿ ಕೊಡಿಸುತ್ತಿದ್ದರು. ಜೀವಕ್ಕಿಂತ ನಾನು ಹೆಚ್ಚು ಅಂತ ಗೊತ್ತಿದ್ರು, ಮಾತನಾಡುವವರಿಲ್ಲ. ಬೆಚ್ಚಗಿನ ಅಪ್ಪುಗೆಯು ಸಿಕ್ತಾ ಇಲ್ಲ, ಜೋಗುಳವಿಲ್ಲ, ಕಥೆಯಿಲ್ಲ .ನೋವನ್ನು ಹೇಳಿಕೊಳ್ಳೋಕೆ ಇಲ್ಲ .

ಮೊದಲಾದರೆ ಕೆಲಸದಲ್ಲಿ ತುಂಬಾ ಬ್ಯುಸಿಯಾಗಿದ್ದರು ಕೂಡ ನಂಜೊತೆ ಒಂಚೂರು ಸಮಯ ಕಳೆಯುತ್ತಿದ್ದೆ. ಈಗ ಅವರಿಗೆ ಅವರ ಸಮಯದಲ್ಲಿ ನಾನೆಲ್ಲೂ ಕಾಣುತ್ತಾನೆ ಇಲ್ಲ. ಈಗ ನನ್ನ ಮನಸ್ಸಿನ ಭಾವನೆಯನ್ನ ಯಾರಲ್ಲಾದರೂ ಹೇಳ್ಕೋಬೇಕು. ಅವರು ನನಗೆ ಆತ್ಮೀಯರಾಗಿ ಇರಬೇಕು. ಅದಕ್ಕಿಂತ ಮುಖ್ಯವಾಗಿ ಅಪ್ಪ-ಅಮ್ಮ ಪ್ರೀತಿಯಿಂದ ಮಾತಾಡಬೇಕು. ಜಗಳ ಆಡೋದು ಕಡಿಮೆಯಾಗಬೇಕು, ದೇವರೇ. ಅಪ್ಪ-ಅಮ್ಮನಿಗೆ ಒಳ್ಳೆ ಬುದ್ಧಿ ಕೊಡು. ಅನ್ನುವ ಪತ್ರ ಅವತ್ತು ಅರ್ಚಕರಿಗೆ ತೀರ್ಥದ ತಟ್ಟೆಯಲ್ಲಿ ಸಿಕ್ಕಿಬಿಡುತ್ತೆ. ಯಾರು ಬರೆದವರೋಗೊತ್ತಿಲ್ಲ. ಆದರೆ ಕೈಮುಗಿದು ಪ್ರಾರ್ಥಿಸಿದರು. ಮನೆಯ ಪ್ರೀತಿ ಕಡಿಮೆಯಾದಾಗ ಹೊರಗಿನ  ಪ್ರೀತಿಯನ್ನು ಮಕ್ಕಳು ಹುಡುಕುವುದಂತ ದಯವಿಟ್ಟು ದೇವರೇ ತಂದೆತಾಯಿಗಳಿಗೆ ಮನವರಿಕೆ ಮಾಡಿಕೊಡಿ ಆ ಮಗುವಿನ ಕಷ್ಟ ಏನು ಅನ್ನೋದನ್ನ... ಮಗುವಿನ ಮಾತನ್ನ ದೇವ್ರು ನಡೆಸಿಕೊಡುತ್ತಾನೆ ಅಂತ ಕಾಣುತ್ತೆ ಕಾದುನೋಡಬೇಕಷ್ಟೇ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ