ಸ್ಟೇಟಸ್ ಕತೆಗಳು (ಭಾಗ ೩೦೨) - ಎಲ್ಲಿರುವೇ...

ಸ್ಟೇಟಸ್ ಕತೆಗಳು (ಭಾಗ ೩೦೨) - ಎಲ್ಲಿರುವೇ...

ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆರಡು ತಿಂಗಳು ಕಾಯ್ತಾಯಿದ್ದೆ. ಅಷ್ಟರಲ್ಲಿ ಅವಳಿಗೆ ಇನ್ಯಾರ ಮೇಲೂ ಅಥವಾ ಬೇರೆಯವರಿಗೆ ಇವಳ ಮೇಲೆ ಪ್ರೀತಿಯಾಗಿ ಅವರು ಜೋಡಿ ಹಕ್ಕಿ ಆಗ್ತಾ ಇದ್ರು. ನನಗೆ ಕೆಲವೊಂದು ಅರ್ಥವೇ ಆಗುವುದಿಲ್ಲ. ಪ್ರೀತಿಯನ್ನು ಹೇಗೆ ಕಂಡುಹಿಡಿಯುವುದು? ಅವಳು ಚಂದ ಹಾಡ್ತಾ ಇರುವಾಗ ಇಷ್ಟವಾಗುತ್ತಾಳೆ, ಇನ್ನೊಬ್ಳು ಡ್ಯಾನ್ಸ್ ಮಾಡುವಾಗ,  ಇನ್ನೊಬ್ಬಳ ಗುಳಿಕೆನ್ನೆಯ ನಗು ಹುಚ್ಚೆಬ್ಬಿಸುತ್ತದೆ, ಇವಳಿಗೆ ಹೆಲ್ಪಿಂಗ್ ನೇಚರ್ ತುಂಬಾ ಇದೆ, ಅವಳ ಮಾತು ಚಂದ, ಹೀಗೆ ತುಂಬಾ ಜನರ ಮೇಲೆ ಬೇರೆ ಬೇರೆ ವಿಚಾರಕ್ಕೆ ಕ್ರಷ್ ಆಗಿದೆ. ಆದರೆ ಇವೆಲ್ಲವೂ ಯಾರೂ ಒಬ್ಬಳಲ್ಲಿ ಇದ್ದು ಅವಳು ಜೀವನಪೂರ್ತಿ ಇಷ್ಟ ಆಗೋದು ಯಾವಾಗ? ಅಂಥವಳು ನನ್ನನ್ನು ಹುಡುಕ್ತಾ ಇದ್ದಾಳೋ, ನಾನು ಅವಳನ್ನು ಹುಡುಕುತ್ತಾ ಇದ್ದೇನೋ ಗೊತ್ತಿಲ್ಲ.  ಓ ನನ್ನ ದೇವತೆ... ಎಲ್ಲಿದ್ದೀಯಾ.... ಯಾವಾಗ ಕಾಣಸಿಗ್ತೀಯಾ.... ಯಾವ ಕ್ಷಣದಲ್ಲಿ... ಯಾವ ರೂಪದಲ್ಲಿ ಎಲ್ಲಿ ಭೇಟಿಯಾಗ್ತೀಯಾ.... ಒಮ್ಮೆ ತಿಳಿಸು ಮಾರಾಯ್ತಿ ....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ