ಸ್ಟೇಟಸ್ ಕತೆಗಳು (ಭಾಗ ೩೦೫) - ತಪ್ಪು

ಸ್ಟೇಟಸ್ ಕತೆಗಳು (ಭಾಗ ೩೦೫) - ತಪ್ಪು

ನಮ್ಮ ಮನೆಯ ಹಿಂಬದಿ ದಾರಿ ಪೂರ್ತಿ ಕತ್ತಲೆ. ಅವತ್ತು ಅಪ್ಪ ರಾತ್ರಿ ಹೊತ್ತು ಅಲ್ಲಿ ಓಡಾಡೋಕೆ ಕಷ್ಟ ಆಗುತ್ತೆ ಬೆಳಕಿನ ವ್ಯವಸ್ಥೆ ಮಾಡು ಅಂತ ಹೇಳಿದ್ರು. ಅದಕ್ಕಾಗಿ ಮನೇಲಿ ಹುಡುಕಿದಾಗ  ಬಳಕೆಯಾಗದ ನಮ್ಮ ಜಗಲಿಗೆ ಹಾಕಿದ ವಿದ್ಯುತ್ ಬಲ್ಬ್ ಮತ್ತು ತಂತಿಯನ್ನು ತೆಗೆದುಕೊಂಡು ಹೋಗಿ  ಹಿಂಬದಿಯ ದಾರಿಯ ಬದಿಯ ನಮ್ಮ ಗೋಡೆಗೆ  ನೇತಾಡಿಸಿದೆ. ಬಲ್ಬ್ ಉರಿಯುತ್ತಿಲ್ಲ. ನಿನ್ನೆ ತಾನೆ ಜಗಲಿಯಲ್ಲಿ ಬೆಳಗಿದ ದೀಪ ಇವತ್ತು ಕತ್ತಲೆಯನ್ನೇ ಇಷ್ಟ ಪಟ್ಟಿತ್ತು. ಬಲ್ಬ್ ಹಾಳಾಗಿತ್ತು. ಇನ್ನೊಂದು ಮೂರು ಬೇರೆ ಬಲ್ಬ್ ತಂದು ಸಿಕ್ಕಿಸಿದರೂ ಉರಿಯುತ್ತಿಲ್ಲ. ಎಲ್ಲಾ ಬಲ್ಬ್ ಹಾಳಾಗಿದೆ ಅಂದುಕೊಂಡು ಬಿಸಾಕಿಬಿಟ್ಟೆ.  ಕೊನೆಗೆ ಕೋಣೆಯ ಬಲ್ಬ್ ಸಿಕ್ಕಿಸಿದಾಗಲೂ ಉರಿಯದಿದ್ದನ್ನು ಕಂಡು ತಂತಿ ಹಾಳಾಗಿದೆ ಅಂದುಕೊಂಡು ಅದನ್ನ ಬದಲಿಸಿದೆ. ಬಲ್ಬ್ ಉರಿಯಿತು. ನಾನು ಸಮಸ್ಯೆಯ ಮೂಲ ಹುಡುಕಲಿಲ್ಲ. ನನ್ನದೇ ಸ್ವಂತ ನಿರ್ಧಾರ ತಗೊಂಡೆ ಅದಕ್ಕಾಗಿ ಬಲ್ಬ್ ಗಳನ್ನು ಕಳೆದುಕೊಂಡೆ. ನಮ್ಮ ಸಂಬಂದಗಳೂ ಹಾಗೇ.. ಸಮಸ್ಯೆಯನ್ನ ಅಥವಾ ತೊಂದರೆ ನೀಡುವವರನ್ನೆ ನಂಬಿ ಕುಳಿತರೆ ನಮ್ಮ ಜೀವನ ನಾಶ. ಬೆಳಕು ಕಳೆದುಕೊಳ್ಳುವವರು ನಾವು. ಸಮಸ್ಯೆಗೆ ಪರಿಹಾರ ಹುಡುಕಿ ಊಹೆಗಳನ್ನ ನಿಲ್ಲಿಸಬೇಕು ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ