ಸ್ಟೇಟಸ್ ಕತೆಗಳು (ಭಾಗ ೩೦೬) - ಪ್ರಯತ್ನ

ಸ್ಟೇಟಸ್ ಕತೆಗಳು (ಭಾಗ ೩೦೬) - ಪ್ರಯತ್ನ

ನಾನು ಮೊದಲೇ ಅಂದುಕೊಂಡಿದ್ದೆ. ಇದರಲ್ಲಿ ಭಾಗವಹಿಸಬಾರದು ಅಂತ. ಬರಿ ಮೋಸ ಮಾಡೋದು. ಅಲ್ಲ ನೀವು ನೋಡಿದ್ರಾ ಅಲ್ಲಿ ಬಹುಮಾನ ಕೊಟ್ಟರಲ್ಲಾ ಆ ತಂಡದಲ್ಲಿ ಒಂದು ತಂಡದ  ಪ್ರದರ್ಶನದಲ್ಲಿ ಒಬ್ಬರಿಗೂ ಸರಿಯಾಗಿ ಮಾತುಗಳು ಬರ್ತಾ ಇರ್ಲಿಲ್ಲ, ಇಡೀ ಪ್ರದರ್ಶನದಲ್ಲಿ ಬರೀ ತಪ್ಪುಗಳೇ ಅಂತ ಎಷ್ಟು ಜನ ನನಗೆ ಕರೆ ಮಾಡಿ ಹೇಳಿದ್ರು ಗೊತ್ತಾ. "ನಿಮ್ಮದೇ ತುಂಬಾ   ಚೆನ್ನಾಗಿ ಇತ್ತು ಅದಕ್ಕೆ ಯಾಕೋ ಬಹುಮಾನ ಕೊಟ್ಟರು ಅಂತ ಗೊತ್ತಿಲ್ಲ. ತೀರ್ಪುಗಾರರು ಇದ್ದಾರಲ್ಲ ಅವರು ಬಹುಮಾನ ಕೊಟ್ಟರುವ ತಂಡಗಳಿಗೆ ತುಂಬಾ ಬೇಕಾದವರಂತೆ. ರಾಜಕೀಯದ ನಡುವೆ ಪ್ರತಿಭೆಗಳಿಗೆ ಬೆಲೆ ಇಲ್ಲ, ಹೀಗೆ ಮಾಡುತ್ತ ಹೋದರೆ ಸ್ಪರ್ಧೆಗೆ ಮುಂದೆ ಯಾರು ಬರ್ತಾರೆ? ಮತ್ತೆ ಉಳಿದ ಇಬ್ಬರು ತೀರ್ಪುಗಾರರಿಗೂ  ಅಂತ ಅನುಭವ ಏನೂ ಇಲ್ಲ. ಅವರಿಗೆ ಬೇಕಾದ ಯಾರನ್ನು ಕರೆಸಿ ಬಿಡುತ್ತಾರೆ. ಕಷ್ಟಪಟ್ಟವರಿಗೆ ಬಹುಮಾನ ಸಿಗೋದೆ ಇಲ್ಲ". 

ಹೀಗಂತ ಮಾತುಕತೆಯೊಂದು ಅಲ್ಲಿ  ಮುಂದುವರೆದಿತ್ತು. ಕೆಲವೊಮ್ಮೆ ವೇದಿಕೆಯ ಪ್ರಯತ್ನಕ್ಕಿಂತ ಅದರ ಹಿಂದಿನ ಪರಿಶ್ರಮಕ್ಕೆ ಬಗ್ಗೆ ಹೆಚ್ಚು ಮೌಲ್ಯ ಸಿಗುತ್ತಂತೆ ಹಾಗಾಗಿ ನಮ್ಮ ಕಡೆಯಿಂದ ಸ್ವಲ್ಪ ಹೆಚ್ಚು ಪ್ರಯತ್ನಗಳನ್ನು ಮಾಡಿದರೆ ಬಹುಮಾನದ ನಿರೀಕ್ಷೆಯನ್ನು ಇಟ್ಕೋಬಹುದು ಇಲ್ಲದಿದ್ರೆ ಹೀಗೆ ಮಾತನಾಡುತ್ತಾ ಓಡಾಡುತ್ತಾ ಇರಬೇಕಾಗಬಹುದು ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ