ಸ್ಟೇಟಸ್ ಕತೆಗಳು (ಭಾಗ ೩೦೮) - ಆಚರಣೆ

ಸ್ಟೇಟಸ್ ಕತೆಗಳು (ಭಾಗ ೩೦೮) - ಆಚರಣೆ

ಸಂಸ್ಕೃತಿ, ಸಾಹಿತ್ಯ, ವಿಚಾರಗಳು ಆಚರಣೆಯ ನಂಬಿಕೆಗಳು ನಮ್ಮ ನಡುವೆ ಬೆಳೆದು ಬಂದಿರುವುದು. ಎಲ್ಲಿಂದಲೂ ಬೋಧನೆ ಮಾಡಿದ್ದಲ್ಲ. ಆದರೆ ಕಾಲ ಹಾಗೆ ಇರುವುದಿಲ್ಲ ಅಲ್ವಾ ? ದೊಡ್ಡ ವೇದಿಕೆಯೊಂದರಲ್ಲಿ ಆತ ಭಾಷಣ ಆರಂಭಿಸಿದ್ದಾನೆ "ಬಂಧುಗಳೇ ನಮ್ಮ ಸಂಸ್ಕೃತಿ ನಮ್ಮ ವಿಚಾರದಾರೆಗಳು ನಮ್ಮ ಆಚರಣೆಗಳು ಬದುಕಿನಲ್ಲಿ ಮುಖ್ಯವಾಗುತ್ತವೆ". ಅದರೊಂದಿಗೆ ಇನ್ನೊಂದು ಗಂಟೆಗಳ ದೊಡ್ಡದೊಡ್ಡ ಮಾತುಗಳ ಭಾಷಣಗಳು ಮುಂದುವರೆದವು ಕೇಳುವ ಜನ ಕಿವಿ ತುಂಬಿಸಿಕೊಂಡು ಚಪ್ಪಾಳೆ ಹೊಡೆದು ಅಲ್ಲಿಂದ ಹೊರಟು ಬಿಟ್ಟರು. 

ಆ ದಿನ ಬಂದಿದ್ದ ಕೆಲವರ ಮನೆಗಳಲ್ಲಿ ಇದೇ ಸುದ್ದಿ ಮಾತನಾಡುತ್ತಿತ್ತು, "ಅವನು ಮಾತನಾಡಿರುವುದು ನಿಜವಾದರೂ ಅವನು ಹೇಳಿರುವ ವಿಚಾರಗಳೇ ನಮ್ಮ ನಂಬಿಕೆಗಳಲ್ಲ. ಈ ಸಂಸ್ಕೃತಿ ಆಚರಣೆ ನಂಬಿಕೆಗಳು ಹೇಳುವವರುಗಿಂತ ಹೆಚ್ಚಾಗಿ ದುಡಿಮೆಯ ವರ್ಗದ ಜನರಲ್ಲಿ ಅಡಕವಾಗಿರುತ್ತದೆ. ಅವರು ಎಂದೂ ವೇದಿಕೆಯ ಮೇಲೆ ನಿಂತು ಭಾಷಣ ಮಾಡುವುದಿಲ್ಲ, ತಮ್ಮ ದಿನದ ಜೀವನದಲ್ಲಿ ಅದನ್ನ ಅಳವಡಿಸಿಕೊಳ್ಳುತ್ತಾರೆ ಆಗಬೇಕಿರುವುದು ಇಷ್ಟೇ. ಹಾಗಾಗಿ ಮಾತಿಗಿಂತ ಕೃತಿ ಮೇಲು ಅನ್ನೋದು ನನಗೆ ಅರ್ಥವಾಯಿತು. ಆಲೋಚನೆಯ ಮಾತುಕತೆಗಿಂತ ಆಚರಣೆಯೇ ಶ್ರೇಷ್ಠ. ಮಾತೇ ಬಂಡವಾಳವಾಗಿರುವಾಗ ಕೆಲಸ ಅದೆಲ್ಲವನ್ನೂ ಮೀರಿ  ನಿಲ್ಲಬೇಕಿದೆ. ಹಾಗಾಗಿ ಮಾತನಾಡುವ ಮುಂಚೆ ಆಚರಣೆಯ ಬಗ್ಗೆ ಯೋಚಿಸಿ ಮುಂದುವರಿಯುವುದು ಒಳ್ಳೆಯದು ಅಲ್ವಾ ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ