ಸ್ಟೇಟಸ್ ಕತೆಗಳು (ಭಾಗ ೩೦೯) - ಕಟ್ಟಡ

ಸ್ಟೇಟಸ್ ಕತೆಗಳು (ಭಾಗ ೩೦೯) - ಕಟ್ಟಡ

ನಿಂತಿರುವ ಎರಡು ಕಟ್ಟಡಗಳ ಮಧ್ಯೆ ನಿಲ್ಲಬೇಕಾದ ಕಟ್ಟಡವೊಂದರ ಕೆಲಸ ಆರಂಭವಾಗಿತ್ತು. ನಿಂತ ಕಟ್ಟಡಗಳು ಒಂದನ್ನೊಂದು ನೋಡಿಕೊಂಡು ಮಾತುಕತೆಯನ್ನು ಶುರುಮಾಡಿದವು. "ಅಲ್ಲಾ ಮಾರಾಯ ಹಲವು ತಿಂಗಳುಗಳಿಂದ ನೋಡುತ್ತಿದ್ದೇವೆ, ಏನೂ ಇಂಪ್ರೂಮೆಂಟ್ ಕಾಣ್ತಾ ಇಲ್ಲ. ಜನ ಮಾತ್ರ ದಿನವೂ ಓಡಾಡುತ್ತಿರುತ್ತಾರೆ. ಬರೀ ಪಂಚಾಂಗಕ್ಕೆ ಇಷ್ಟು ಕೆಲಸ ಮಾಡಿದರೆ ಹೇಗೆಯೋ, ಅಲ್ಲೂ ಅವರು ಈಗ ಬೇಗ  ಕೆಲಸ ಮಾಡದೆ ಇದ್ದರೆ ನಾವು ತುಂಬ ಸಮಯ  ನಿಂತ ಹಾಗೆ ಅವನು ನಿಲ್ಲಬೇಕಲ್ವಾ? ಹಾಗಾಗಿ ತುಂಬಾ ಸಮಯ ಗಟ್ಟಿಯಾಗಿ ನಿಲ್ಲಬೇಕು ಅಂತ ಆದರೆ ಇಳಿಯಬೇಕಾದ ಆಳ ತುಂಬಾ ದೊಡ್ಡದು. ನೆಲದೊಳಗಿನ ಕಟ್ಟಡದ ಸುಳ್ಳು, ನೆಲದ ಮೇಲೆ ಇರೋದು ಮಾತ್ರ ಸತ್ಯ ಅಂತ ನಂಬಿಬಿಡುತ್ತಾರೆ. ಹೌದು ನಾವು ಮೇಲೆ ಹೇಗಿರುತ್ತೇವೆಯೋ ಒಳಗೂ ಅದಕ್ಕಿಂತಲೂ ಗಟ್ಟಿಯಾಗಿ ಪದರಗಳನ್ನು ಜೋಡಿಸಿ ಕೊಂಡಿರಬೇಕು. ಹಾಗಾಗಿ ಜನ ಗಮನಿಸುವುದು ಹೊರಗಾದರೂ ನಾವು ಒಳಗಿಳಿದು ಬದುಕಬೇಕು. ಕಟ್ಟಡಗಳ ಮಾತುಕತೆ ಹಾಗೆಯೇ ಮುಂದುವರೆಯಿತು. ಸಂಜೆ ಕತ್ತಲಿನ ಕಡೆಗೆ ಓಡಿದ. ಹಾಗೆ ನಿದ್ದೆಯ ಸಮಯ ಕಟ್ಟಡಗಳು ನಿದ್ದೆಗೆ ಜಾರಿದ ಜಾರಿದವು ಹೊಸ ಕಟ್ಟಡದ ಕೆಲಸ ಚಾಲ್ತಿಯಲ್ಲಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ