ಸ್ಟೇಟಸ್ ಕತೆಗಳು (ಭಾಗ ೩೧೧) - ಒಳ್ಳೆಯವರಾಗಲು...

ಸ್ಟೇಟಸ್ ಕತೆಗಳು (ಭಾಗ ೩೧೧) - ಒಳ್ಳೆಯವರಾಗಲು...

ನಾವೆಲ್ಲರೂ ಒಳ್ಳೆಯವರೇ ಅಲ್ವಾ? ನಾನು ಇಷ್ಟರವರೆಗೆ ಅಂದುಕೊಂಡಿದ್ದೆ ಒಳ್ಳೆಯವರು ಕೆಲವರು ಮಾತ್ರ ಸಿಗಬಹುದು ಅಂತಾ, ಆದ್ರೆ ಅದು ಸುಳ್ಳು ಅನ್ನೋದು ಸಾಬೀತಾಯಿತು. ರಸ್ತೆಯಲ್ಲಿ ವೇಗವಾಗೊಂದು ಆಂಬುಲೆನ್ಸ್ ಸಾಗುತ್ತಿತ್ತು. ದಾರಿ ಬದಿ ನಿಂತಿದ್ದವರು ಮತ್ತು ಶಬ್ದ ಕೇಳುತ್ತಿದ್ದವರೆಲ್ಲಾ ಕೈ ಮುಗಿದು ಪ್ರಾರ್ಥಿಸುತ್ತಿದ್ದರು " ದೇವರೇ ಆ ಜೀವಕ್ಕೆ ಏನೂ ತೊಂದರೆಯಾಗೋದು ಬೇಡಾ" ಎಂಥಹ ದೊಡ್ಡ ಯೋಚನೆ. ನಾವು ನೋಡದೇ ಇರುವ ಸೈನಿಕನೊಬ್ಬ , ಉದಾರ ಮನಸಿನವನೊಬ್ಬ ಮರಣಿಸಿದರೆ "ಛೇ ಈ ಮರಣ ಸಂಭವಿಸಬಾರದಿತ್ತು,ಅವರು ಇನ್ನಷ್ಟು ದಿನ ಬದುಕಬೇಕಿತ್ತು" ಹೋಗದೇ ಇರೋ ಸ್ಥಳದಲ್ಲಿ, ಯಾವುದೋ ದೇಶದಲ್ಲಿ, ಪ್ರವಾಹ, ಭೂಕಂಪ, ಯುದ್ದವೇನೋ ಘಟಿಸಿದರೂ "ಛೇ ಅಯ್ಯೋ , ಅಲ್ಲಿಯ ಬದುಕು ಹೇಗೆ " ಹೀಗೆ ಅನುಕಂಪದ ಜೊತೆ ಸಣ್ಣ ನೋವು ಮನದೊಳಗೆ ಸಣ್ಣ ಕಂಪನವನ್ನು ಎಬ್ಬಿಸುತ್ತದೆ ಎಂದಾದರೆ ನಾವು ಒಳ್ಳೆಯವರಲ್ವಾ? ಎಲ್ಲರ ನೋವನ್ನು ಬಲ್ಲವರಾಗುತ್ತಿದ್ದೇವೆ, ಮನದೊಳಗೆ  ಪುಟ್ಟ ಜಾಗವೊಂದನ್ನು ಅಪರಿಚಿತರಿಗೂ ನೀಡುತ್ತಿದ್ದೇವೆ ಹಾಗಾಗಿ ನಾವು ಒಳ್ಳೆಯವರು....ಪ್ರತೀ ದಿನವೂ ಇನ್ನೊಂದು ದಿನ ಬದುಕಲು ಇಷ್ಟು ಸ್ಪೂರ್ತಿ ಸಾಕಲ್ವಾ.....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ