ಸ್ಟೇಟಸ್ ಕತೆಗಳು (ಭಾಗ ೩೧೭) - ಜಗಳ

ಸ್ಟೇಟಸ್ ಕತೆಗಳು (ಭಾಗ ೩೧೭) - ಜಗಳ

"ಸರ್ ತಪ್ಪಾಯ್ತು ಗಾಡಿ ಕಂಟ್ರೋಲ್ ಸಿಗಲಿಲ್ಲ" 

"ಸರಿ ಅಮ್ಮಾ ಆದರೆ ನೋಡ್ಕೊಂಡು ಬರಬೇಕಲ್ಲ ನಾನು ರಸ್ತೆ ಬದಿ ನಿಲ್ಲಿಸಿದ್ದೇನೆ. ಬಂದು ಬಿಟ್ಟು ಹೊಡೆದಿದ್ದೀಯಾ, ನೋಡು ಗಾಡಿ ಹಿಂದೆ ಎಷ್ಟು ಡ್ಯಾಮೇಜ್ ಆಗಿದೆ ಅಂತ, ಇದರ ದುಡ್ಡು ಯಾರು ಕೊಡುತ್ತಾರೆ?"

"ಸರ್ ಪ್ಲೀಸ್ ಸರ್" 

"ಸರಿ ಆಯ್ತು ನಿನ್ನ ಹತ್ತಿರ ಲೈಸೆನ್ಸ್ ಇದ್ಯಾ, ಮೊದಲು ಸರಿಯಾಗಿ ಗಾಡಿ ಕಲ್ತ್ಕೋ" 

"ಯಾರೋ ನೀನು ,ಆಗ್ಲಿಂದ ಬಾರಿ ಪ್ರವಚನ ಕೊಡುತ್ತೀದ್ದೀಯಾ, ಹುಡುಗಿ ಸಾರಿ ಅಂತ ಕೇಳಿದ್ಲಲ್ಲಾ, ನೀನು ಗಾಡಿ ಖರ್ಚು ಬಗ್ಗೆ ಮಾತಾಡ್ತೀಯಾ ಹೋಗಿ ಇನ್ಸೂರೆನ್ಸ್ ಮಾಡಿಸಿ ಅಲ್ಲಿ ಸಿಗುತ್ತದೆ" 

"ನೀನು ಯಾವನೋ ನನಗೆ ಹೇಳೋದಿಕ್ಕೆ. ನಿನಗಿದು ಸಂಬಂಧ ಇಲ್ಲದಿರುವುದು". 

"ನನಗೆ ಸಂಬಂಧ ಇರೋದಕ್ಕೆ ನಾ ಮಾತಾಡುತ್ತಿರುವುದು, ಘನಂದಾರಿ ಕೆಲಸ ಮಾಡಿದ ಮಾತಾಡ್ತೀಯಾ  ರಸ್ತೆ ಬದಿ ಕಾರು ಅದರಲ್ಲೂ ಮಾತು ಮಾತ್ರ ಭಾರಿ ಜೋರು" ನೀನ್ಯಾಕ್ ಅವರ ಹತ್ರ ಸಾರಿ ಕೇಳ್ತೀಯಾ ತಪ್ಪಾಗಿದೆ ತಾನೇ, ಕೇಳಿದರೆ 4 ಚಿಲ್ಲರೆ ಬಿಸಾಕಿದ್ರೆ ಸಾಕು". 

"ಯಾರಮ್ಮ ಅವರು ನಿನ್ನ ಪರವಾಗಿ ಮಾತಾಡುತ್ತಿದ್ದಾರೆ?"

"ಗೊತ್ತಿಲ್ಲ ದೇವರಾಣೆ ನನಗೆ ಯಾರು ಅಂತ ಗೊತ್ತಿಲ್ಲ ಅವರ ಮತ್ತು ನಿಮ್ಮ ಜಗಳದಲ್ಲಿ. ನನ್ನನ್ನು ಎಳೆದು ತರಬೇಡಿ ತಪ್ಪಾಯಿತು"

"ಅದು ಹೌದಮ್ಮ ಅವನ್ಯಾರೋ ಬಂದು ಬಾಯಿಗೆ ಬಂದ ಹಾಗೆ ಮಾತಾಡ್ತಾನೆ ಇದು ತಪ್ಪಲ್ವಾ "

ಜಗಳ ನಿಂತಿತು ಎಲ್ಲ ಹೊರಟು ಹೋದರು. ಆಕ್ಸಿಡೆಂಟ್ ಮಾಡಿದವರು, ಮಾಡಿಸಿಕೊಂಡವರು ಇಬ್ಬರೂ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿದರು. ಘಟನೆಯನ್ನು ನೋಡದೆ ಇದ್ದ ಯಾವನೋ ಒಬ್ಬ ಮಧ್ಯಪ್ರವೇಶಿಸಿ ಒಂದಷ್ಟು ಜಗಳಗಳನ್ನು ಸೃಷ್ಟಿಸಿ ಒಬ್ಬರ ಮೇಲೆ ಒಬ್ಬರು ಬೈದು ಕೊಳ್ಳುವಂತೆ ಮಾಡಿ ಹಾಗೆ ಕಾಲುಜಾರಿ ಬಿಟ್ಟ ಪರಿಸ್ಥಿತಿ ಗೊತ್ತಿಲ್ಲ ಮಾತಾಡೋರು ತುಂಬ ಜನ ಇರುತ್ತಾರೆ ಹಾಗೆ ಮಾತನಾಡಿದವರೆಲ್ಲ ನಮ್ಮ ಹುಡುಗಿಗೆ ಮಾತಾಡುತ್ತಿದ್ದಾರೆ ಅಂತ ಅಂದುಕೊಳ್ಳುವುದು ಮೂರ್ಖತನ. ಪರಿಸ್ಥಿತಿಯ ಒಳಗಿರುವವರು ಅದನ್ನು ನಿಭಾಯಿಸಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಇಲ್ಲದಿದ್ದರೆ... 

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ