ಸ್ಟೇಟಸ್ ಕತೆಗಳು (ಭಾಗ ೩೨೧) - ನಂಬಿಕೆ

ಸ್ಟೇಟಸ್ ಕತೆಗಳು (ಭಾಗ ೩೨೧) - ನಂಬಿಕೆ

ಗಾಡಿಯನ್ನೇರಿ ಒಂದು ಊರನ್ನ ತಲುಪಬೇಕು ಒಂದು ಹೊರಟಿದ್ದೇನೆ. ನಾನು ಇಲ್ಲಿ ನಂಬಿರುವುದು ಒಂದು ಚಲಾಯಿಸುತ್ತಿರುವ ನನ್ನನ್ನು, ಅಲ್ಲಿಗೆ ತಲುಪಿಸುತ್ತಿರುವ ಗಾಡಿಯನ್ನ, ಜೊತೆಗಿದ್ದು ದಾರಿ ತಿಳಿಸಿದವರನ್ನ, ಅಲ್ಲಲ್ಲಿ ಇದೇ ದಾರಿಯಲ್ಲಿ ಮುಂದೆ ಸಾಗಿ ಅನ್ನೋ ಫಲಕಗಳನ್ನ, ಮೊಬೈಲ್ ಅಲ್ಲಿರುವ ಗೂಗಲ್ ಮ್ಯಾಪ್ ಅನ್ನ ಹೀಗೆ ಪ್ರತಿಯೊಂದನ್ನು ನಂಬಿಕೊಂಡೇ ಪಯಣ ಸಾಗಿದೆ. ಇಲ್ಲಿ ಯಾವುದಾದರೂ ಒಂದು ಕೈ ಕೊಟ್ಟರೂ ಕೂಡ ತಲುಪುವ ವೇಗ ಕಡಿಮೆಯಾಗಬಹುದು, ಒಂದಷ್ಟು ಸಮಯ ವ್ಯರ್ಥವಾಗಬಹುದು. ಯಾವತ್ತೂ ನಮ್ಮೂರು ತೊರೆದು ಇನ್ನೊಂದು ಊರು ತಲುಪುವುದಕ್ಕೆ ಹಲವರ ಸಹಕಾರ ತುಂಬಾ ಅವಶ್ಯಕತೆ ಇರುತ್ತದೆ. ಕೆಲವೊಂದು ಸಲ ನಾವು ಇನ್ನೊಂದು ಊರನ್ನು ತಲುಪಿಯಾಗಿಯೂ ಸಹಕರಿಸಿದವರನ್ನ ಮರೆತು ಮುಂದೆ ಸಾಗುವುದು ನಾವು ನಮಗೆ ಮಾಡುತ್ತಿರುವಂತಹ ಮೋಸ ಅಂದುಕೊಳ್ಳುತ್ತೇನೆ. ನಾನಂತೂ ಇನ್ನೊಂದು ಊರಿಗೆ ಹೊರಡಲು ಗಾಡಿಯನ್ನೇರಿದ್ದೇನೆ ಎಲ್ಲವೂ ಸರಿಯಾಗಿದೆ ಅಂದುಕೊಂಡಿದ್ದೇನೆ, ಕೆಲವೊಂದು ಕಡೆ ಮುಂದಿನ ದಾರಿಯ ಫಲಕಗಳಿಲ್ಲ, ದಾರಿ ನೋಡೋಣವೆಂದರೆ ಮೊಬೈಲ್ ನಲ್ಲಿ ನೆಟ್ವರ್ಕ್ ಇಲ್ಲ, ಹತ್ತಿರದಲ್ಲಿ ಕೇಳೋಕೆ ಮನುಷ್ಯರಿಲ್ಲ, ಹಾಗಾಗಿ ತಪ್ಪು ದಾರಿಯನ್ನು ಹಿಡಿದಿದ್ದೇನೋ ಸರಿಯೋ ಎನ್ನುವುದು ಸದ್ಯಕ್ಕಂತೂ ಗೊತ್ತಿಲ್ಲ. ಒಂದೊಂದು ಕಡೆ ತಲುಪಿ ಅದು ನಾನು ತಲುಪಬೇಕಾದ ಊರಿಗೆ ಸೇರದೆ ಇನ್ನೊಂದೂರಿಗೆ ಸೇರಿದರೆ ಅದು  ನಾನು ತಲುಪಬೇಕಾದ ಊರಿಗಿಂತ ಇಷ್ಟವಾಗಿದ್ದರೆ ಅಲ್ಲೇ ಉಳಿದು ಬಿಡುತ್ತೇನೆ. ಇಲ್ಲ ಇಲ್ಲಿಂದ ನಾನು ಊರಿಗೆ ಹೋಗಬೇಕಾದರೂ ದಾರಿ ಇದೆ ಅನ್ನುವುದಾದರೆ ಅದೇ ದಾರಿ ಹಿಡಿಯುತ್ತೇನೆ. ಎಲ್ಲವೂ ನನಗೆ ಬಿಟ್ಟಿರೋದು. ಸದ್ಯಕ್ಕಂತೂ ಸಾಗ್ತಾ ಇದ್ದೇನೆ ಮಾಹಿತಿ ನೀಡುವರಿಲ್ಲ, ತಿಳಿಸುವ ಮಾಧ್ಯಮವು ಇಲ್ಲ, ಹಾಗಾಗಿ ತಲುಪಿ ಮುಂದೇನಾಯಿತು ಅನ್ನೋದನ್ನ ತಿಳಿಸುತ್ತೇನೆ. ಹಾಗೆಯೇ ನೀವು ಚಲಿಸುತ್ತಿರುವ ಊರಿನ ಬಗ್ಗೆಯೂ ತಿಳಿಸಿಕೊಡಿ ತಪ್ಪು ದಾರಿಯ ಮಾಹಿತಿಯನ್ನ ಒಂದು ಕಡೆ ಹಂಚಿಬಿಡಿ. ದಾರಿ ಒಂದೇ ಆದರೆ ಜೊತೆಗೆ ಸಾಗೋಣ. ಅಂದುಕೊಂಡು ಸಾಗಿದ್ದೇನೆ ...ಮುಂದೇ ಒಳಿತೇ ಆಗುತ್ತೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ