ಸ್ಟೇಟಸ್ ಕತೆಗಳು (ಭಾಗ ೩೨೭) - ಭಗವಂತ

ಸ್ಟೇಟಸ್ ಕತೆಗಳು (ಭಾಗ ೩೨೭) - ಭಗವಂತ

ಗಾಡಿ ರಸ್ತೆಯನ್ನು ಏರಿ ಊರಿನ ಕಡೆಗೆ ಹೊರಟಿತ್ತು. ರಾತ್ರಿ 12 ದಾಟಿದ ಸಮಯ. ರಸ್ತೆ ನಿರ್ಜನವಾಗಿದೆ. ದೂರದ ಊರಿನಲ್ಲೊಂದು ಕಾರ್ಯಕ್ರಮ ಮುಗಿಯುವಾಗ ತಡವಾದ ಕಾರಣ ಮನೆಗೆ ತಲುಪಬೇಕಾದ ಆತುರದಲ್ಲಿ ಗಾಡಿಯ ವೇಗ ಹೆಚ್ಚಾಗುತ್ತಿದೆ ಜನರಿಲ್ಲದ ಕಾರಣಕ್ಕೋ ಏನೋ ವೇಗ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಸಾಗಿದೆ. ಆದರೆ ಸ್ಟೇರಿಂಗ್ ತಿರುಗಿಸುತ್ತಿದ್ದ ಅವನಿಗೆ ತಕ್ಷಣ ಏನು ಅನ್ನಿಸಿತೋ ಏನೋ ವೇಗವನ್ನು ಪೂರ್ತಿ ಕಡಿಮೆ ಮಾಡಿ ನಿಧಾನವಾಗಿ ಹೋಗಲು ಆರಂಭಿಸಿದ. ನಿಧಾನದ ಪಯಣ ಕೆಲವು ನಿಮಿಷಗಳನ್ನು ಡಾಟಿತೋ ಇಲ್ಲವೋ, ಆ ಕ್ಷಣದಲ್ಲಿ ಒಂದು ಸಣ್ಣ ತೂಕಡಿಸುವಿಕೆ ಉಂಟಾಗಿ ಕಣ್ಣುಮುಚ್ಚಿ ತೆರೆಯುವಷ್ಟರಲ್ಲಿ ರಸ್ತೆಯ ಮೇಲಿದ್ದ ಗಾಡಿ ಸೇತುವೆಯ ಮೇಲೇರಿ ಕ್ಷಣಾರ್ಧದಲ್ಲಿ ಗಾಡಿ ಹಿಡಿತಕ್ಕೆ ಸಿಕ್ಕಿ ಅಲ್ಲೆ ನಿಂತುಕೊಂಡಿತು. ಕೂದಲೆಳೆಯ ಅಂತರದಲ್ಲಿ ದೊಡ್ಡ ಅವಘಡದಿಂದ ಗಾಡಿಯೊಳಗಿರುವ ಏಳು ಜೀವಗಳನ್ನು ಉಳಿಸಿದ್ದು ಭಗವಂತನೇ ಏನೋ... ಮನೆಯ ಕಾರ್ಯಕ್ರಮದ ದೇವರ ಪ್ರಸಾದ ಅವನ ಮನೆಯನ್ನು ತಲುಪಬೇಕಿತ್ತು ಎನ್ನುವುದು ದೈವ ನಿರ್ಣಯವೋ ಅಥವಾ ವೇಗವಾಗಿದ್ದು ಗಾಡಿಯನ್ನು  ನಿಧಾನವಾಗಿ ಮಾಡಿಸಿದ್ದು ಕೂಡ ದೈವ ಸಂಕಲ್ಪವು ಏನೊ.,...  ತಡೆಯಿರುವ ಸೇತುವೆ ಮೇಲೆ ಏರಿದ್ದು, ಕ್ಷಣಾರ್ಧದಲ್ಲಿ ಗಾಡಿ ಹಿಡಿತಕ್ಕೆ ಸಿಕ್ಕಿದ್ದು.... ಎಲ್ಲವೂ ಅವನ ನಿರ್ಣಯದಂತೆ ನಡೆಯಿತೋ ಎನ್ನುವುದು ಮನೆಯವರ ಆಲೋಚನೆ.... ಆಗಿರಬಹುದು, ಆಗದೇ ಇರಬಹುದು.... ಅವರ ಯೋಚನೆ ಅವರದ್ದು

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ