ಸ್ಟೇಟಸ್ ಕತೆಗಳು (ಭಾಗ ೩೩೪) - ಖರೀದಿಸಿ

ಸ್ಟೇಟಸ್ ಕತೆಗಳು (ಭಾಗ ೩೩೪) - ಖರೀದಿಸಿ

ಈ ರಸ್ತೆ ಬದಿ ಬಂದು ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿವೆ. ಆದ್ರೂ ಬದುಕು ಅಷ್ಟೇನೂ ಬದಲಾವಣೆ ಕಂಡಿಲ್ಲ. ಕೆಲವು ದಿನ ಬರಿಯ ನೀರು ಕುಡಿದೇ ಮಲಗಿದ್ದೇನೆ. ಕೆಲವೊಂದು ಸಲ ನನಗೇನಾದ್ರೂ ತಿನ್ನೋಕೆ ಸಿಗುತ್ತೆ ಆದರೆ ಅಪ್ಪ-ಅಮ್ಮನಿಗೆ ಏನು ಸಿಗುವುದಿಲ್ಲ. ಸತ್ಯ ಹೇಳುತ್ತೇನೆ ನನಗೆ ಯಾವುದೇ ಆಸೆಗಳಿಲ್ಲ. ನಾನು ದೇವರಲ್ಲಿ ಪ್ರತಿದಿನ ಬೇಡೋದು ಇಷ್ಟೇ. ನನ್ನ ನಮ್ಮ ಕುಟುಂಬವನ್ನು ಹೊರತುಪಡಿಸಿ ಎಲ್ಲರ ಬಳಿಯೂ ತುಂಬಾ ದುಡ್ಡು ಆಗಲಿ. ಎಲ್ಲರಿಗೂ ಆಟವಾಡುವ ಮನಸ್ಸು ಬರಲಿ .ಅದರಲ್ಲಿ ಕ್ರಿಕೆಟನ್ನೇ ಹೆಚ್ಚು ಇಷ್ಟ ಪಡಲಿ. ಹೊಸ ಹೊಸ ಕಡೆ ಬೇರೆ ಬೇರೆಯವರು ಕ್ರಿಕೆಟನ್ನು ಆಯೋಜನೆ ಮಾಡ್ಲಿ. ನಾನು ಹೀಗೆ ಆಸೆ ಪಡುವುದಕ್ಕೆ ಕಾರಣ ನಮ್ಮ ಮನೆಯಲ್ಲಿ ಎಲ್ಲರೂ ಊಟ ಮಾಡಬೇಕು ಅನ್ನೋದು. ನಮ್ಮೂರಿಂದ ಮರದ ತುಂಡುಗಳನ್ನು ತಂದು ಇಲ್ಲಿ ಕ್ರಿಕೆಟ್ ಬ್ಯಾಟ್ ಗಳನ್ನು ಮಾಡಿ ಮಾರಾಟ ಮಾಡುತ್ತೇವೆ. ಆಡುವವರೇ ಇಲ್ಲದಿದ್ದರೆ ಇದನ್ನ ತೆಗೆದುಕೊಳ್ಳುವವರು ಯಾರು. ತೆಗೆದುಕೊಳ್ಳದಿದ್ದರೆ ನಾನು ಊಟ ಮಾಡುವುದು ಹೇಗೆ. ಅದಕ್ಕೆ ನಿಮ್ಮೆಲ್ಲರಿಗೂ ಹೆಚ್ಚು ದೇವರಲ್ಲಿ ಬೇಡುತ್ತೇನೆ. ನಿಮಗೆ ದುಡ್ಡು ಹೆಚ್ಚಾದರೆ ಒಂದು ಸಲ ಈ ಕಡೆ ಬಂದು ಬ್ಯಾಟ್  ತೆಗೆದುಕೊಂಡು ಹೋಗಿ. ಅವತ್ತು ನಮ್ಮ ಹೊಟ್ಟೆ ತಣ್ಣಗಾಗಿ ಮಲಗಬಹುದು. 

ಸಂತೋಷದಿಂದ ಹೆಚ್ಚು ಹೆಚ್ಚು ಆಡಿದಷ್ಟು ನಾವು ತುಂಬಿದ ಹೊಟ್ಟೆಯಲ್ಲಿ ಮಲಗುತ್ತೇವೆ. ಅದಕ್ಕೆ ನಮ್ಮ ಬದುಕು ಬದಲಾಗುವುದಕ್ಕೆ ನೀವು ಕಾರಣಕರ್ತರಾಗುತ್ತೀರಿ ಎಂದು ನಂಬಿದ್ದೇವೆ. ಇನ್ನೊಂದು ಸ್ವಲ್ಪ ದಿನ ಕಾಯುತ್ತೇವೆ ಮತ್ತೆ ಹೊಸ ಊರಿಗೆ ಹೊರಡುತ್ತೇವೆ ಅದಕ್ಕಿಂತ ಮೊದಲು ಒಮ್ಮೆ ಭೇಟಿಯಾಗಿ... ಖರೀದಿಸಿ …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಅಂತರ್ಜಾಲ ತಾಣ