ಸ್ಟೇಟಸ್ ಕತೆಗಳು (ಭಾಗ ೩೩೫) - ಬದುಕು

ಸ್ಟೇಟಸ್ ಕತೆಗಳು (ಭಾಗ ೩೩೫) - ಬದುಕು

ಕಳೆದುಕೊಂಡದ್ದು ಅವನು. ಅದರ ನೋವು, ಕಳೆದುಕೊಂಡವರ ಮೌಲ್ಯ, ಎಲ್ಲದರ ಅರಿವಿದ್ದವನು ಒಬ್ಬನೇ ಯಾಕೆಂದರೆ ಅವರ ಜೊತೆಗೆ ಬದುಕಿದ್ದವನು ಅವನೊಬ್ಬನೇ. ಕಳೆದುಕೊಂಡವರ ಶ್ರಾದ್ಧದ ದಿನ ಕಳೆದುಕೊಂಡವರ ಆತ್ಮೀಯ ಸ್ನೇಹಿತರು ಬಂಧು-ಬಳಗದವರು ಪರಿಚಯಸ್ಥರು ಎಲ್ಲರೂ ಬಂದಿದ್ದಾರೆ. ಬಂದವರೆಲ್ಲರೂ ಸಮಾಧಾನ  ಮಾಡಿಕೋ ಎಂದಷ್ಟೇ ಹೇಳಿದ್ದಾರೆ. ಬಂದವರೆಲ್ಲರಿಗೂ ಚಿಂತೆಗಳು, ತಾಪತ್ರಯಗಳು, ಸಮಸ್ಯೆಗಳು ಎಲ್ಲವೂ ಇವೆ. ಈ ಮನೆಯಲ್ಲಿ ಮಾತ್ರ ಅವರು ಸಮಾಧಾನ ಮಾಡುವ ಪಾತ್ರವನ್ನು ನಿಭಾಯಿಸಿ ಅಲ್ಲಿಂದ ಮುಂದೆ ಅವರು ಅವರವರದೇ ಪಾತ್ರಗಳನ್ನು ವಿಭಿನ್ನವಾಗಿ ಅಭಿನಯಿಸಿ ಜೀವನದಲ್ಲಿ ಮುಂದೆ ಸಾಗಬೇಕು. ಇಲ್ಲಿ ಇದ್ದ ಪಾತ್ರವನ್ನ ಆಗಾಗ ಯೋಚಿಸುತ್ತಾ  ಆ ಪಾತ್ರ ಇಲ್ಲದ್ದಕ್ಕೆ ವ್ಯಥೆ ಪಡುತ್ತಾ ಪ್ರತಿಯೊಂದು ಕೆಲಸದಲ್ಲೂ ಜೊತೆಯಾಗುತ್ತಿದ್ದ ಪಾತ್ರವನ್ನು ಮತ್ತೆ ಮತ್ತೆ ನೆನಪಿಸಿಕೊಂಡವನು ಇವನೊಬ್ಬನೇ, ಯಾಕೆಂದರೆ ಇಲ್ಲಿ ಕಳೆದುಕೊಂಡದ್ದು ಇವನು ಮಾತ್ರ. ಬಂದು ಹೋದವರು ಯಾರು ಕಳೆದುಕೊಂಡವರಲ್ಲ. 

ಹಾಗಾಗಿ ನಾವು ಕಳೆದುಕೊಂಡದ್ದಕ್ಕೆ ನಾವೇ ದುಃಖಿಸಬೇಕು. ನಮ್ಮ ಬದುಕನ್ನು ನಾವೇ ಬದುಕಬೇಕು. ಜೀವನವೆಂಬ ರಂಗದಿಂದ ನಿರ್ಗಮಿಸುವ ವರೆಗೂ ಬದುಕಬೇಕು ಅದು ತನ್ನದೇ ಬದುಕಿರಬೇಕು ಇದು ಅವನ ನಿರ್ಧಾರ .....ಹೇಗಿದೆ ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ