ಸ್ಟೇಟಸ್ ಕತೆಗಳು (ಭಾಗ ೩೩೭) - ಆಲೋಚಿಸಿ

ಸ್ಟೇಟಸ್ ಕತೆಗಳು (ಭಾಗ ೩೩೭) - ಆಲೋಚಿಸಿ

ನನ್ನ ಜೀವಕ್ಕೊಂದು ಬೆಲೆ ಇಲ್ಲಾ ಅಲ್ವಾ? ನೀವೋ ಅವರೋ ಒಟ್ಟಿನಲ್ಲಿ ಕೊನೆಗೆ ಸಾಯಬೇಕಾದವರು ನಾವೇ...  ನಾವು ಕತ್ತರಿಸುವ ವಿಧಾನ ಸರಿ, ಅದರಿಂದ ಜೀವಿಗೆ ತನ್ನ ಪ್ರಾಣ ಹೋಗಿದ್ದರ ಅರಿವೇ ತಿಳಿಯುವುದಿಲ್ಲ, ಇಲ್ಲಾ ನಾವು ಕತ್ತರಿಸುವಾ ವಿಧಾನವೇ ಸರಿ ಅದರಿಂದ ಜೀವಿಗೆ ಪ್ರಾಣ ಭಯ ಅನ್ನಿಸುವುದಿಲ್ಲ. ಇದು ನಿಮ್ಮಗಳ ನಿರಂತರ ವಾದ. ಯಾರದ್ದು ಸರಿ  ಇನ್ಯಾರದ್ದೋ ತಪ್ಪು ಆದರೂ ಪ್ರಾಣ ಹೋಗೋದು ನಮ್ಮವರದ್ದು. ನಮ್ಮ ಬದುಕಿಗೆ ಅರ್ಥವಿಲ್ಲ, ಯಾರದ್ದೂ ನೆರವಿಲ್ಲ.... ಸಾವಿನ ಭಯವೇ ನಿತ್ಯ ಬದುಕಿನ ನಿರಂತರತೆಗೆ ಸಾಕ್ಷಿ. ನಮ್ಮನ್ನು ತಂದಿರೋದೇ ಸಾಯಿಸೋಕೆ ಅಂತಾದರೆ ನಮ್ಮ ಬದುಕಿಗೆ ಇನ್ನೇನು ಸ್ಪೂರ್ತಿ ಇದೆ. ನಿಮ್ಮ ಜಗಳದಲ್ಲಿ ನಮ್ಮವರ ಅಮಾಯಕ ಸಾವು. ಇದಕ್ಕೆ ನ್ಯಾಯ ಸಿಗುವವರೆಗೂ ನಾನು ಹೋರಾಟ ನಡೆಸುತ್ತೇನೆ. ಒಮ್ಮೆ ನಮ್ಮ ಬದುಕಿನಲ್ಲೂ ನಿಂತು ನೀವು ಹೇಗಿದೆ ಅನ್ನೋದನ್ನ ಆಲೋಚಿಸಿ... ಆಗ ಅರ್ಥವಾಗುತ್ತದೆ ನಮ್ಮ ಬದುಕಿನ ಬವಣೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ