ಸ್ಟೇಟಸ್ ಕತೆಗಳು (ಭಾಗ ೩೩೮) - ನಿಲ್ದಾಣ
ಅದು ಮೂಲ ನಿಲ್ದಾಣ ಅಲ್ಲಿಂದಲೇ ಎಲ್ಲಾ ವಾಹನಗಳು ಹೊರಡುವುದು. ಆ ನಿಲ್ದಾಣವೇ ದೇವರ ಪಾದ, ಅಲ್ಲಿಂದ ಹೊರಟ ಎಲ್ಲಾ ವಾಹನಗಳು ಅಂದರೆ ಮಾನವ ಜೀವಿಗಳು. ಎಲ್ಲರೂ ಇಲ್ಲಿಂದ ಹೊರಟು ಊರುಸುತ್ತಿ ಮತ್ತೆ ಮೂಲ ಸ್ಥಾನ ಸೇರಬೇಕು. ಅಲ್ಲಿ ಮೂಲ ನಿಲ್ದಾಣದಲ್ಲಿ ಒಬ್ಬ ಕಾಲ ಹಂಚುವ ಸೇವಕನಿದ್ದಾನೆ. ಅವನು ಭವಿಷ್ಯ ಯೋಚಿಸದೇ ಕಾಲವನ್ನು ಹಂಚುತ್ತಾನೆ. ಇಲ್ಲಿ ದೇವರಿಗೆ ಒಂದು ವಿನಂತಿ ಸಲ್ಲಿಸೋದಕ್ಕೆ ಇದೆ, ಅಲ್ಲಿ ಕಾಲವನ್ನು ಹಂಚುವವನಿಗೆ ವ್ಯಕ್ತಿಯ ಭವಿಷ್ಯ ತಿಳಿಸಿಬಿಡಿ ಜೊತೆಗೆ ಅವನ ಕಾರ್ಯಯೋಜನೆಗಳನ್ನ ತಿಳಿದು ಆಯಸ್ಸು ನೀಡುವಂತೆ ತಿಳಿಸಿಬಿಡಿ. ಆ ಆಯಸ್ಸು ಹಂಚುವವನು ಅವನಿಗೆ ಇಷ್ಟ ಬಂದ ಹಾಗೆ ಆಯಸ್ಸು ನೀಡುತ್ತಿದ್ದಾನೆ. ಹಲವಾರು ಜನ ಒಳ್ಳೆಯ ಸಮಾಜ ಸೇವೆ ಮಾಡೋರು, ಜನರಿಗೆ ಸ್ಪೂರ್ತಿ ಆಗಿರುವವರಿಗೆ ಆಯಸ್ಸು ಕಡಿಮೆ ಕೊಟ್ಟ ಕಾರಣ ಕೆಲಸ ಪೂರ್ತಿ ಮಾಡುವ ಮೊದಲೇ ನಿರ್ಗಮಿಸುತ್ತಿದ್ದಾರೆ, ಕೆಲವೊಬ್ಬರಿಗೆ ಅನಗತ್ಯವಾಗಿ ಹೆಚ್ಚೇ ಆಯಸ್ಸು ಕೊಟ್ಟಿದ್ದಾನೆ. ಇದನ್ನು ಸರಿಪಡಿಸುವ ಕೆಲಸವಾಗಬೇಕು ಭಗವಂತಾ... ಭಕ್ತರ ಮಾತನ್ನು ಕೇಳುತ್ತೀಯಾ ಅನ್ಕೊಂಡಿದ್ದೇನೆ. ಕಾಲ ನಿರ್ಣಾಯಕನ ಕೆಲಸವೊಂದು ಪ್ರಾಮಾಣಿಕವಾಗಲಿ....
-ಧೀರಜ್ ಬೆಳ್ಳಾರೆ
ಚಿತ್ರ : ಇಂಟರ್ನೆಟ್ ತಾಣ