ಸ್ಟೇಟಸ್ ಕತೆಗಳು (ಭಾಗ ೩೪೧) - ಆಸೆ

ಆಸೆಗಳೇ ನಮ್ಮನ್ನು ಇನ್ನಷ್ಟು ಬದುಕಲು ಪ್ರೇರೇಪಣೆ ನೀಡಿರುವುದು. ಅದರಿಂದಲೇ ಬದುಕು ಸುಂದರವಾಗುವುದು. ನನಗೂ ಆಸೆ ಇದೆ. ನಾನು ದಿನವೂ ಪಯಣಿಸುತ್ತೇನೆ, ಅದು ರಿಕ್ಷಾ, ಬಸ್ಸು, ಕಾಲ್ನಡಿಗೆ ಯಾವುದೇ ಆಗಿರಲಿ ಜೊತೆಗೊಬ್ಬರು ಸಹ ಪ್ರಯಾಣಿಕರು ಇರುತ್ತಾರೆ. ನಾನು ಇಳಿದು ಹೊರಟಮೇಲೆ ಅವರ ಮುಖದಲ್ಲೊಂದು ಪುಟ್ಟ ನಗುವಿರಬೇಕು. " ಇವರು ಇನ್ನಷ್ಟು ದೂರ ಜೊತೆಗೆ ಬರಬೇಕಿತ್ತು, ಇವರಿರುವ ಕಡೆ ಬದುಕಿಗೆ ಹುಮ್ಮಸ್ಸು ಖಂಡಿತಾ" ಹೀಗೆಂದು ಯೋಚಿಸುತ್ತಾ ಮುಂದುವರಿಯಬೇಕು. ಜೊತೆಗೆ ಆ ಪಯಣವನ್ನು ಆಗಾಗ ಮೆಲುಕು ಹಾಕಬೇಕು. ಇಷ್ಟಿದ್ದರೆ ಸಾಕು ಬದುಕು ಸಾರ್ಥಕ. ಇದು ಬದುಕಿದ್ದಾಗ ಮಾತ್ರವಲ್ಲ, ಉಸಿರು ನಿಂತ ಮೇಲೂ ಜೀವನ ಪಯಣದಲ್ಲಿ ಜೊತೆಯಾದವರು ಇದೇ ವಿಚಾರವನ್ನೇ ಪುನರುಚ್ಛರಿಸಬೇಕು. ಹೀಗೊಂದು ಹುಚ್ಚು ಆಸೆ. ಪ್ರಯತ್ನ ಪಡ್ತಾ ಇದ್ದೇನೆ. ಯಶಸ್ಸು ಖಂಡಿತಾ ಸಿಗುತ್ತೆ ಯಾಕೆಂದರೆ ಪ್ರಯತ್ನಿಸ್ತಾ ಇದ್ದೇನಲ್ವಾ? ಏನಂತೀರಿ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ