ಸ್ಟೇಟಸ್ ಕತೆಗಳು (ಭಾಗ ೩೪೨) - ವೇಶ್ಯೆ

ಸ್ಟೇಟಸ್ ಕತೆಗಳು (ಭಾಗ ೩೪೨) - ವೇಶ್ಯೆ

ಊರ ಹೊರಗಿನ ಮನೆ. ಊರಿನವರ್ಯಾರೂ ಅದನ್ನ ತಮ್ಮೂರಿಗೆ ಸೇರಿದ್ದು ಎಂದು ಒಪ್ಪಿಕೊಳ್ಳೊದಿಲ್ಲ. ಆಲ್ಲಿ ಬದುಕುತ್ತಿರೋಳು ಅವಳು. ವೇಶ್ಯೆ ಎಂಬ ನಾಮದೇಯ ಅವಳಿಗೆ. ಅವಳ ಹೆಸರು ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬರು ಮತ್ತಿನಲ್ಲಿ ಒಂದೊಂದು ಹೆಸರನ್ನಿಟ್ಟಿದ್ದಾರೆ. ಅಸಹ್ಯಗಳನ್ನ ಒಳಗೊಳಗೇ ಸಹಿಸಿಕೊಂಡೇ ಬದುಕು ಕಂಡವಳು. ಅವಳಲ್ಲಿ ಇನ್ನೂ ಉತ್ತರ ಸಿಗದ ಪ್ರಶ್ನೆಗಳಿವೆ. ಉತ್ತರಿಸುವ ಧೈರ್ಯ ಯಾರೂ ಮಾಡಿಲ್ಲ. "ಕಾಮದಾಹ ತಣಿಸಲು ಬಳಿ ಬಂದು ಮಲಗ್ತಾ ಇರೋದಕ್ಕೆ ನನ್ನ ವೇಶ್ಯೆ ಎನ್ನುವವರು ನೀವು ಅದೇ ದಾಹ ತೀರಿಸೋಕೆ ಬರುವ ಗಂಡಸರನ್ನ ರಸಿರೆನ್ನುವುದು ಯಾಕೆ? ನಾನು ಅಂದೊಮ್ಮೆ ಗರ್ಭ ಧರಿಸಿದ ಬಗ್ಗೆ ಆಡಿಕೊಂಡವರು ನೀವು, ನನಗೂ ತಾಯ್ತನದ ಸುಖಬೇಕು, ನಾನು ನಿಮ್ಮ ಹಾಗೆಯೇ ಮಗುವನ್ನ ಹೆರಬೇಕು ಅನ್ನುವ ಯೋಚನೆಯೂ ಇಲ್ಲದೇ ಹಿಯಾಳಿಸಿದವರು ನೀವು . ಯಾಕೆ ಹೀಗೆ..?ಉತ್ತರಿಸುವ ಮುಖಗಳು ಊರಲ್ಲಿಲ್ಲ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ