ಸ್ಟೇಟಸ್ ಕತೆಗಳು (ಭಾಗ ೩೫೫) - ಬಣ್ಣ

ಸ್ಟೇಟಸ್ ಕತೆಗಳು (ಭಾಗ ೩೫೫) - ಬಣ್ಣ

ನೈಜತೆಯನ್ನು ಮರೆಮಾಡಲು ಬಣ್ಣದ ಮೊರೆಹೋಗುತ್ತೇವೆ. ಆ ಬಣ್ಣದಿಂದ ಅದೇನು ಸಂಪಾದಿಸುತ್ತೇವೆ ಗೊತ್ತಿಲ್ಲ. ಆದರೆ ನೈಜತೆಯನ್ನು ಮುಂದಿಟ್ಟುಕೊಂಡು ಬದುಕಲು ಸಾದ್ಯವಾಗುತ್ತಿಲ್ಲವೆ?. ಏನು ಹೀಗಾದರೆ ನಾವು ನಮಗೆ ಮೋಸ ಮಾಡಿದ ಹಾಗೆ ಅಲ್ವಾ? ನಮ್ಮನ್ನ ನಿಜವಾಗಿ ಹೇಗಿದ್ದೇವೆ ಹಾಗೆ ಒಪ್ಪಿಕೊಳ್ಳುವವರು ನಮ್ಮ ಮುಂದಿರಬೇಕು, ಅದರ ಹೊರತು ನಾವು ಹೀಗೆಯೇ ಇರಬೇಕು, ನಮ್ಮಲ್ಲಿ ಬದಲಾವಣೆಗಳು ಆಗಲೇಬಾರದು ಅನ್ನೋ ಕಾರಣಕ್ಕೆ ಮುಖಕ್ಕೆ ಬಣ್ಣಗಳನ್ನು ಲೇಪಿಸಿ ಕೊಳ್ಳುತ್ತೇವೆ, ಬಿಳಿ ಕೂದಲಿಗೆ ಕಪ್ಪು ಬಣ್ಣ ಬಳಿಯುತ್ತೇವೆ, ಇದು ನಾವು ನಮ್ಮನ್ನ ಎದುರಿದ್ದವರಿಗೆ ಒಪ್ಪಿಸುತ್ತಿರುವುದು. ನಮಗೆ ಧೈರ್ಯ ಇಲ್ಲ ಅಂತ ಕಾಣುತ್ತದೆ. ನನ್ನ ನಿಜತನವನ್ನು ಎದುರಿಟ್ಟುಕೊಂಡು ಬದುಕುವುದಿಲ್ಲ ಅಂತನಿಸುತ್ತದೆ. ಆ ಕಾರಣಕ್ಕೆ ಹೊಸ ಹೊಸ ಸ್ವರೂಪದಿಂದ ಬದಲಾಗಲು ಪ್ರಯತ್ನಿಸುತ್ತೇವೆ. ಆ ಕಾರಣಕ್ಕೆ ಬದಲಾಗಬೇಕಾಗಿರುವುದು ನಮ್ಮೊಳಗಿನ ಆಲೋಚನೆ. ನನ್ನ ನೈಜತೆಯನ್ನು ನಾನು ಮರೆಮಾಚುವುದಿಲ್ಲ. ನನಗೆ ಮುಖವಾಡದ ಅವಶ್ಯಕತೆ ಇಲ್ಲ. ನನ್ನ ಹೀಗೆ ಸ್ವೀಕರಿಸುವರು ಪ್ರೀತಿಯಿಂದ ಸ್ವೀಕರಿಸಲಿ. ಅಲ್ವಾ ಇದು ನನ್ನ ಯೋಚನೆ ಮಾತ್ರ. ನಿಮ್ಮದು ಏನು?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ