ಸ್ಟೇಟಸ್ ಕತೆಗಳು (ಭಾಗ ೩೫೬) - ಲಗೇಜು
ಎಲ್ಲಾದ್ರೂ ಹೋರಾಡುವಾಗ ಲಗೇಜುಗಳನ್ನು ತುಂಬಿಸುವುದು ಸಾಮಾನ್ಯ. ಹೋಗಬೇಕಾದ ಜಾಗಕ್ಕೆ ಹೋಗಿ ಮತ್ತೆ ಹಿಂತಿರುಗಿ ಬಂದಾಗ ಮತ್ತೆ ಅದೇ ಮನೆಯಲ್ಲಿ ಲಗೇಜು ಖಾಲಿ ಮಾಡುತ್ತೇವೆ. ಆದರೆ ಹೆಣ್ಣಿರುವ ಮನೆಯಲ್ಲಿ ಮದುವೆಗೆ ಮುಂಚೆ ಲಗೇಜ್ ಒಂದ್ಸಲ ತುಂಬಿಕೊಳ್ಳುತ್ತೆ, ಆದರೆ ತುಂಬಿಕೊಂಡ ಲಗೇಜು ಕೈಹಿಡಿಯುವವನ ಮನೆಯಲ್ಲಿಯೇ ಹೋಗಿ ತೆರೆಯುವುದು. ಮತ್ತೆ ಅದೇ ರೀತಿಯಾಗಿ ತವರು ಮನೆಗೆ ಮರಳುವುದಿಲ್ಲ. ಆ ಕ್ಷಣದಲ್ಲಿ ಲಗೇಜು ತುಂಬಿಸುವಾಗ ಅಪ್ಪ ಅಮ್ಮ ಖರೀದಿಸಿ ಕೊಟ್ಟ ಬಟ್ಟೆಗಳನ್ನು ಕೊಟ್ಟ ಬಟ್ಟೆಗಳನ್ನ, ಕೋಣೆಯಲ್ಲಿ ನೇತು ಹಾಕಿದ ಬಟ್ಟೆಗಳನ್ನು, ಬೀರುವಿನಲ್ಲಿ ತುಂಬಿಸಿದ್ದ ಸಾರಿಳನ್ನು ಎಲ್ಲವನ್ನೂ ದೊಡ್ಡ ಟ್ರಂಕಿನ ಒಳಗೆ ತುಂಬಿಸುವಾಗ, ತಾನು ಪ್ರತಿ ದಿನವೂ ಬಳಸುತ್ತಿದ್ದ ಪೌಡರ್, ಬಾಚಣಿಗೆ ಹೀಗೆ ಎಲ್ಲ ವಸ್ತುಗಳನ್ನ ತುಂಬಿಸಿಕೊಳ್ಳುತ್ತಿರುವಾಗ ಅವಳ ಮನಸ್ಸಲ್ಲಿ ಓಡುತ್ತಿರುವ ಆಲೋಚನೆಗಳು ಹೇಗಿರಬಹುದು. ಯೋಚನೆಗಳನ್ನ ಊಹಿಸುವುದಕ್ಕೂ ಕೂಡ ಆಗುವುದಿಲ್ಲ. ಅದಕ್ಕೆ ಹೆಣ್ಣು ಅನ್ನೋದು ತ್ಯಾಗದ ಸಂಕೇತ. ಈ ಮನೆಯಿಂದ ಲಗೇಜುಗಳನ್ನು ತುಂಬಿಸಿಕೊಂಡ ಹಾಗೆ ಮನೆಯವರ, ಪ್ರೀತಿ, ಕನಸು, ಆಲೋಚನೆಗಳನ್ನು, ಎಲ್ಲವನ್ನು ತುಂಬಿಕೊಂಡು ಜವಾಬ್ದಾರಿಯನ್ನು ಕೂಡ ಹೊತ್ತುಕೊಂಡು ಇನ್ನೊಂದು ಮನೆಯ ಹೊಸಿಲನ್ನು ದಾಟಲು ಹೊರಡುವ ಮನಸ್ಥಿತಿಗೆ ದೊಡ್ಡ ಶರಣು ಹೇಳಲೇಬೇಕು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ