ಸ್ಟೇಟಸ್ ಕತೆಗಳು (ಭಾಗ ೩೫೭) - ಸಂಭ್ರಮ
ಸಂಭ್ರಮಕ್ಕಾದರೂ ಜೊತೆಯಾದರಲ್ಲಾ ಅನ್ನೋದೇ ಖುಷಿ. ಮನಸ್ಸಿನೊಳಗೆ ಏನಿದೆಯೋ ಗೊತ್ತಿಲ್ಲ, ಆದರೆ ಈಗ ಪ್ರಸ್ತುತ ಬದುಕುತ್ತಿರುವ ಈ ಗಳಿಗೆಯಲ್ಲಿ ಎಲ್ಲರಿಗೂ ಖುಷಿಯಿದೆ. ಪ್ರೀತಿ ಇದೆ, ಅಕ್ಕರೆಯಿದೆ, ನಮ್ಮ ಕೆಲಸ ಅನ್ನುವ ಮಮತೆ ಇದೆ. ಹೀಗಿರುವಾಗ ಇದಕ್ಕಿಂತ ಇನ್ನೇನು ಬೇಕು. ಪ್ರತಿಯೊಂದು ವಿಚಾರಗಳಿಗೂ ಆ ಭಗವಂತ ಕಾರಣಗಳನ್ನ ಜೋಡಿಸಿರುತ್ತಾನಂತೆ. ಸಂಭ್ರಮದ ಗಳಿಗೆಯನ್ನು ಮತ್ತೆ ಜೊತೆಗೂಡಿಸೋದಕ್ಕೆ ಭಗವಂತ ಮಾಡಿಸಿ ಬಿಟ್ಟಿದ್ದಾನೆ ಅಂತನಿಸುತ್ತದೆ. ತುಂಬಾ ಸಮಯದಿಂದ ದೂರವಿದ್ದವರು, ಮನೆಯಿಂದಲೂ ಮನಸ್ಸಿನಿಂದಲೂ ಈಗ ಹತ್ತಿರವಾಗಿದ್ದಾರೆ. ಈ ಸಂಭ್ರಮ ಸನ್ನಿವೇಶಗಳು ಹೀಗೆ ಮುಂದುವರಿಯಲಿ ...ಬದುಕು ಚಲಿಸುತ್ತಿರುವ ಈ ಕ್ಷಣದಲ್ಲಿ ಜೊತೆ ಯಾದವರೆಲ್ಲ ಜೀವನಪೂರ್ತಿ ಜೊತೆಯಿರಲಿ, ಅವರಿಗೂ ಒಂದಷ್ಟು ಕನಸುಗಳಿವೆ, ಇನ್ನೊಂದಷ್ಟು ಕನಸುಗಳನ್ನು ಅವರೊಂದಿಗೆ ಕಟ್ಟಿಕೊಳ್ಳಬೇಕಿದೆ, ಎಲ್ಲವೂ ಸೇರಿಕೊಂಡು ಬದುಕು ನನಸಾಗುತ್ತದೆ. ಈಗ ಖುಷಿ ಇರೋದು ಈ ಸಂಭ್ರಮದ ಕ್ಷಣಕ್ಕೆ... ಜೊತೆಯಾದ ಮನಸ್ಸುಗಳಿಗೆ …
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ