ಸ್ಟೇಟಸ್ ಕತೆಗಳು (ಭಾಗ ೩೫೮) - ತಿರುಗಿ

ಸ್ಟೇಟಸ್ ಕತೆಗಳು (ಭಾಗ ೩೫೮) - ತಿರುಗಿ

ಯಾವಾಗಲೂ ಮಾಡಿದ ಕಾರ್ಯಕ್ಕೆ ಇನ್ನೆಲ್ಲಿಂದಲೋ ಪ್ರತ್ಯುಪಕಾರ ಸಿಗುತ್ತದೆ. ನಾವು ಮಾಡಿದ ಕಾರ್ಯ ನೂರು ಪ್ರತಿಶತ ತಿರುಗಿ ನಮ್ಮ ಕಡೆಗೆ ಬಂದೇ ಬರುತ್ತದೆ. ಆದರೆ ಸ್ವಲ್ಪ ಸಮಯ ಕಾಯಬೇಕು. ನನಗೂ ಗೊತ್ತಿರಲಿಲ್ಲ ನಾನು ಸಂಬಂಧಗಳನ್ನು ಜೋಡಿಸೋದುಕ್ಕೋಸ್ಕರ ಹಲವರ ಜೊತೆ ಬೆರೆತಿದ್ದೇನೆ, ಎಲ್ಲೂ ಕೂಡ ಪ್ರತ್ಯುಪಕಾರದ ನಿರೀಕ್ಷೆ ಇರಲಿಲ್ಲ. ಆದರೆ ಎಲ್ಲಾ ಕಡೆಯಿಂದಲೂ ನಾನು  ಜೊತೆಗಿದ್ದಕ್ಕಿಂತಲೂ ಹೆಚ್ಚಿನ ಭಾಗವಹಿಸುವಿಕೆ ಅತ್ತ ಕಡೆಯಿಂದ ದೊರಕಿತು. ಕೆಲವು ಕಡೆಯಿಂದ ಜೊತೆಗೆ ನಿಂತು ಸಹಾಯ, ಇನ್ನು ಕೆಲವರು ಮಾತಿನಿಂದ, ಇನ್ನು ಕೆಲವರು ಕೆಲಸದಿಂದ ಹೀಗೆ ಬೇರೆಬೇರೆ ರೀತಿಯಲ್ಲಿ ಜೊತೆಯಾಗಿ ನಿಂತಿರು.ನಾನು ಮಾಡಿದ ಒಳ್ಳೆಯ ಕೆಲಸಗಳೆಲ್ಲವೂ ಮತ್ತೆ ತಿರುಗಿ ನನ್ನ ಬಳಿಗೆ ಬಂದಿದೆ ಅಂಥಾದರೆ ಖಂಡಿತವಾಗಿಯೂ ಕೆಟ್ಟ ಕೆಲಸವೂ ನನ್ನನ್ನೇ ಹುಡುಕಿಕೊಂಡು ಬರುತ್ತೆ. ಈಗ ಮನಸೊಳಗೆ ಮತ್ತೆ ಆಲೋಚನೆಗಳ ಸುಳಿಯುತ್ತಿದೆ. ಸುಳಿ ಬೆಳೆಯುತ್ತ ಬೆಳೆಯುತ್ತಾ ದೊಡ್ಡದಾಗುತ್ತ ಹೋದ ಹಾಗೆ ಕೆಟ್ಟ ಕೆಲಸಗಳು ಖಂಡಿತವಾಗಿಯೂ ತಿರುಗಿ ಬಂದೇ ಬರುತ್ತದೆ. ಹಾಗಾಗಿ ಕೆಲಸ ಮಾಡುವ ಮೊದಲು ಒಂದು ಕ್ಷಣ ನಿಂತು ಆಲೋಚಿಸಿ ಮುಂದುವರೆಯುವ ಮನಸ್ಸು ಮಾಡಿದ್ದೇನೆ. ಸ್ವಂತ ಅನುಭವಕ್ಕೆ ಬಂದಾಗ ಮಾತ್ರ ನಿಜ ವಿಷಯದ ಅರಿವಾಗುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ