ಸ್ಟೇಟಸ್ ಕತೆಗಳು (ಭಾಗ ೩೫೯) - ಪರಿಹಾರ
ನಾನಂದುಕೊಂಡಿದ್ದೆ ಸಮಸ್ಯೆ ಪರಿಹಾರ ಆಗೋದು ಕಷ್ಟ ಆಗುತ್ತೆ ಅಂತ. ಜೊತೆಗೆ ಇಷ್ಟರವರೆಗೆ ಸಮಸ್ಯೆ ಪರಿಹಾರಕ್ಕೆ ಯಾರಿಂದಲಾದರೂ ಸಹಾಯ ಒದಗಿ ಬರಲೇಬೇಕು ಅಂದು ಕೊಂಡಿದ್ದೆ. ನನಗರ್ಥವಾದದ್ದು ಇವತ್ತು ಸಮಯಾನೇ ಎಲ್ಲದಕ್ಕೂ ಉತ್ತರ ಕೊಡುತ್ತೆ. ಆದರೆ ಅದಕ್ಕೆಂದಲೇ ಕಾಯುತ್ತಾ ಕೂರುವುದಲ್ಲಾ ಪ್ರಯತ್ನ ಪಡಲೇ ಬೇಕು. ದೈವ ನಿರ್ಣಯ ಅನ್ನೋದು ಒಂದಿರುತ್ತೆ. ಅದರಹಾಗೇ ಅಗುತ್ತೆ. ಸಮಸ್ಯೆಗಳೇ ನಮ್ಮನ್ನ ಕುಗ್ಗಿಸೋದಕ್ಕೆ ಬರೋದು ಅದಕ್ಕೆ ಹೆದರಿ ಕುಳಿತರೇ ಮುಂದಿನ ಅದ್ಭುತ ಬದುಕಿನ ಕ್ಷಣಗಳನ್ನ ಕಳೆದುಕೊಂಡು ಬಿಡ್ತೇವೆ. ಅದಕ್ಕೋಸ್ಕರ ಕಾಯಬೇಕು. ರಸನಿಮಿಷಗಳು ಎದುರಾಗುವ ಮುಂಚೆ ಕಹಿಕ್ಷಣಗಳನ್ನ ಅನುಭವಿಸಿದರೆ ಮಾತ್ರ ರಸದ ಸ್ವಾದ ತಿಳಿಯುವುದು. ನಾನಂತೂ ಇದನ್ನೇ ನಂಬಿದ್ದೇನೆ. ನಿಜದ ಉದಾಹರಣೆಯಾಗಿದ್ದೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ