ಸ್ಟೇಟಸ್ ಕತೆಗಳು (ಭಾಗ ೩೬೮) - ತುರಿಕೆ

ಸ್ಟೇಟಸ್ ಕತೆಗಳು (ಭಾಗ ೩೬೮) - ತುರಿಕೆ

ನನಗೆ ಸರಿಯಾಗಿ ಗೊತ್ತಿಲ್ಲ. ಇದು  ಅಭ್ಯಾಸವೋ,ದುರಭ್ಯಾಸವೋ ಅಂತ . ಅಂದರೆ ತುರಿಕೆಯಾದ ಜಾಗದಲ್ಲಿ ತುರಿಸುವುದನ್ನು ಬಿಟ್ಟು ಬೇರೆ ಜಾಗದಲ್ಲಿ ತೋರಿಸುತ್ತಿರುತ್ತೇನೆ. ತುರಿಕೆಯಾದ ಜಾಗದಲ್ಲಿ ತುರಿಸಿದರೆ ಆ ಕ್ಷಣಕ್ಕೆ ನೆಮ್ಮದಿ ಸಿಗಬಹುದು. ಜಾಗ ಬದಲಿಸಿದರೆ ಇನ್ನೊಂದು ಕಡೆ ಗಾಯವಾಗಿ ಮತ್ತೇನಾದರೂ ಹೊಸ ತೊಂದರೆ ಆರಂಭವಾಗಬಹುದು. ಹಾಗೆಯೇ ಸಮಸ್ಯೆಗಳಿರುವ ಕಡೆಯೇ ಅದನ್ನ ಪರಿಹಾರ ಮಾಡಬೇಕು ಅಥವಾ ಯೋಚನೆಗಳು ತಲೆಬಿಸಿಗಳನ್ನು ಆ ಕ್ಷಣಕ್ಕೆ, ಆ ವಾತಾವರಣದಲ್ಲಿ ಬಿಟ್ಟು ಹೊರಡಬೇಕು. ಇಲ್ಲಿಯ ವಿಚಾರಗಳು ಇನ್ನೊಂದು ಕಡೆಗೆ ಕೊಂಡೊಯ್ದಾಗ  ಆ ಜಾಗದಲ್ಲಿ ಹೊಸತೊಂದು ಗಾಯ ಹುಟ್ಟಿಕೊಳ್ಳುತ್ತದೆ. ನಮಗೆ ತೊಂದರೆ ಆರಂಭವಾಗುತ್ತದೆ. ನನಗಿದು ಸ್ವಲ್ಪ ನಿಧಾನವಾಗಿ ಅರ್ಥವಾದದ್ದು. ಅರ್ಥವಾದದ್ದನ್ನು ಅಳವಡಿಸಿಕೊಳ್ಳಬೇಕು ಅಲ್ವಾ? ಹಾಗಾಗಿ ತುರಿಕೆಯಾಗುವ ಜಾಗದಲ್ಲಿ ತುರಿಸುವುದೇ ಒಳ್ಳೆಯದು ಅಂತ ನಿರ್ಧಾರ ಮಾಡಿದ್ದೇನೆ. ಆದ್ದರಿಂದ ಒಂದಷ್ಟು ಗಾಯಗಳು ಕಡಿಮೆಯಾಗಿದೆ. ಪ್ರೀತಿ ಹೆಚ್ಚಾಗಿದೆ, ಬದುಕು ಸುಂದರವಾಗಿದೆ. ಆ ಕಾರಣಕ್ಕೆ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ ...

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ