ಸ್ಟೇಟಸ್ ಕತೆಗಳು (ಭಾಗ ೩೭೫) - ಅಡ್ಡ ರಸ್ತೆ

"ಸರ್ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ಹಾಕಿಕೊಟ್ಟರೂ ಗುರಿ ತಲುಪೋದಿಲ್ಲ"
"ಇಲ್ಲ ಸರ್ ನಾನದನ್ನ ಒಪ್ಪೋದಿಲ್ಲ. ದಾರಿ ಗೊತ್ತಿದ್ದ ಮೇಲೆ ತಪ್ಪೋದು ಹೇಗೆ"
"ಬೇಕಾದರೆ ಪರೀಕ್ಷೆ ಮಾಡಿ"
ಎಲ್ಲರಿಗೂ ಗುರಿಯೆಂಬ ಗೂಗಲ್ ಮ್ಯಾಪ್ ಹಾಕಿ ಕೊಡಲಾಯಿತು. ಪಯಣ ಆರಂಭವಾಯಿತು. ಸಾಗುವ ದಾರಿಯಲ್ಲಿ ಹಲವಾರು ಅಡ್ಡ ರಸ್ತೆಗಳಿದ್ದವು. ದಾರಿಯನ್ನು ಬದಲಿಸಲು ಪ್ರೋತ್ಸಾಹಿಸುತ್ತಿದ್ದವು. ಕೈಯಲ್ಲಿ ದಾರಿಯ ಗುರುತಿದ್ದರೂ ಹಲವರು ಒಂದೊಂದು ಅಡ್ಡ ರಸ್ತೆ ಹಿಡಿದು ಹೋದರು. ಹೋಗುವಾಗ ಅಂದುಕೊಂಡದಿಷ್ಟೆ, " ಒಂದು ಸಲ ಹೋಗಿ ಹೇಗಿದೆ ಅಂತ ನೋಡಿಕೊಂಡು ಬರೋಣ, ಆಮೇಲೆ ಗೂಗಲ್ ಮ್ಯಾಪ್ ಹೇಳಿದ ಜಾಗಕ್ಕೆ ಹೋದರಾಯಿತು. ಅಡ್ಡ ರಸ್ತೆಯಲ್ಲಿ ಹೋದವರೆಲ್ಲಾ ಅಲ್ಲೇ ಉಳಿದು ಬಿಟ್ಟರು ಬಾಳು ನರಕವಾಯಿತು. ಕೆಲವರು ಗುರಿ ತಲುಪಿದರು. ಈ ಅಡ್ಢರಸ್ತಗಳೇ ದುಷ್ಚಟಗಳು. ನಮ್ಮನ್ನ ದಾರಿ ತಪ್ಪಿಸುತ್ತವೆ. ಅದರೊಳಗೆ ಇಳಿದ ಮೇಲೆ ಮೇಲೇಳದಂತೆ ಮಾಡುತ್ತವೆ. ಹಾಗಾಗಿ ಸಾಗುವ ದಾರಿಯಲ್ಲಿ ಎಚ್ಚರ ಅಗತ್ಯ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ