ಸ್ಟೇಟಸ್ ಕತೆಗಳು (ಭಾಗ ೩೭೯) - ದಾರಿ

ಸ್ಟೇಟಸ್ ಕತೆಗಳು (ಭಾಗ ೩೭೯) - ದಾರಿ

ಅವಳ ಮುಂದೆ ಎರಡು ಅಡ್ಡರಸ್ತೆಗಳಿದ್ದಾರೆ. ಎರಡು ನೇರ ದಾರಿಗಳು ಎಲ್ಲಿಯೂ ಕೂಡ ಅಡ್ಡಾದಿಡ್ಡಿ ಹೊಂಡ ಗುಂಡಿಗಳು ಕಾಣುತ್ತಿಲ್ಲ. ತಲುಪಬೇಕಾದ ಗುರಿಯನ್ನು ಕೇಳಿದರೆ ಅವರು ಯಾರೂ ಕೂಡ ಈ ರಸ್ತೆಯಲ್ಲಿ ಹೋದರೆ ನಿಮಗೆ ಸಿಗುವುದಿಲ್ಲ. ಅಂತಾರೆ ಆದರೆ ಅವನಿಗೆ ನಂಬಿಕೆಯಲ್ಲಿ ಖಂಡಿತವಾಗಿಯೂ ಇದೇ ರಸ್ತೆಯಿಂದ ತನಗೆ ಗುರಿ ಸಿಗುತ್ತದೆ.. ಹಾಗಾಗಿ ತಾಯಿಯನ್ನು ನಂಬಿಕೊಂಡು ಹೊರಟಿದ್ದಾಳೆ. ತಾಯಿಯ ಮಾತನ್ನು ಕೇಳಿಕೊಂಡು ಬಲಬದಿಯ ರಸ್ತೆಯನ್ನು ಆರಿಸುವ ನಿರ್ಧಾರ ಮಾಡಿದ್ದು ಕೆಲವು ಹೆಜ್ಜೆಗಳಲ್ಲಿ ಬಹಳಷ್ಟು ಮೊದಲೇ ಅಡತಡೆಗಳು ಕಾದಿದ್ದಂತೆ ಎದುರಾದವು. ಮುಂದೆ ಚಲಿಸುವುದು ಹೇಗೆ ಗೊತ್ತಾಗ್ಲಿಲ್ಲ? ಈ ದಾರಿಯಲ್ಲೇ ಬಾರದಿತ್ತು ಅನ್ನುವ ಕಿರುಕುಳವೇ ಜೋರಾಗಿರುವಾಗ, ಮತ್ತೆ ಹಿಂದಿರುಗಿರೋಣ ಅಂದರೆ ಶಕ್ತಿ ಇಲ್ಲ .

ಇನ್ನೊಂದು ದಾರಿಯನ್ನು ಹಿಡಿದು ಒಂದಷ್ಟು ಹೆಜ್ಜೆಗಳನ್ನು ಹಾಕುವಾಗ ತುಂಬಾ ಖುಷಿಯ ಯಾತನೆ ಖಂಡಿತವಾಗಿಯೂ ಎಲ್ಲರಿಗಿಂತಲೂ ಬೇಗ ಅಲ್ಲಿಗೆ ತಲುಪುತ್ತೇನೆ.ಅವಳ ನಂಬಿಕೆ.ಅಡ್ಡಗೋಡೆಗಳನ್ನು ಕಟ್ಟಿದ್ದಾರೆ ಮುಂದುವರಿಯುವುದಕ್ಕೆ ಜಾಗವಿಲ್ಲ ಮುಳ್ಳು ಗೋಡೆಗಳನ್ನು ರೂಪಿಸಿದ್ದಾರೆ. ಮುಂದಿನ ದಾರಿಯ ಬಗ್ಗೆ ಅವರಿಗೂ ಮತ್ತೆ ಯೋಜನೆ ಆರಂಭವಾಯಿತು ಇದ್ದ ಹೊಟ್ಟೆ ಪೂರ್ತಿ ತಿಂದು ಅಮ್ಮನ ಬಳಿ ಕುಳಿತು ಮಾತುಗಳು .ಅದಕ್ಕೆ ಅಮ್ಮನ ಉತ್ತರ .ನಮ್ಮ ಜೀವನದ ದಾರಿಯು ಮೊದಲಿಗೆ ಖುಷಿ ಕೊಡ್ತು ನಂತರ ಇಳಿತವಾಗುತ್ತಾ ಸಾಗಿತು. ದೂರು ಕೊಡುವ ಹಲವಾರು ವ್ಯಕ್ತಿಗಳಿದ್ದಾರೆ ಅಥವಾ ಕಡಿಮೆ ದೂರವನ್ನು ತಲುಪುವುದಕ್ಕೆ ದಾರಿ ಸಿಕ್ಕಿದ್ದರೂ ಮಾಹಿತಿಪೂರ್ಣವಿಲ್ಲ ಹಾಗಾಗಿ ನಮ್ಮ ದಾರಿಗಳನ್ನು ನಿಖರವಾಗಿ ಆರಿಸಿಕೊಳ್ಳುವುದು ನಮ್ಮ ಕೈಲಿದೆ. ಜೀವನದ ದಾರಿಯಲ್ಲಿ ನಿಂತು ಯಾರೋ ನಮಗೆ ಪ್ರತಿಕ್ಷಣವು ಎಚ್ಚರಿಸಿ ದಾರಿಯನ್ನು ತಿಳಿಸುವುದಿಲ್ಲ. ನಮ್ಮ ದಾರಿಯನ್ನು ನಾವೇ ಹುಡುಕಿಕೊಳ್ಳಬೇಕು .

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ