ಸ್ಟೇಟಸ್ ಕತೆಗಳು (ಭಾಗ ೩೮೦) - ಹಸಿರು

ಸ್ಟೇಟಸ್ ಕತೆಗಳು (ಭಾಗ ೩೮೦) - ಹಸಿರು

ಆ ತಿರುವಿನಲ್ಲಿ ನಿಂತು ಗಮನಿಸಿದರೆ ಮನೆಯೊಳಗೆ ತುಂಬಾ ಜನ ಇದ್ದಾರೆ ಅನ್ನಿಸ್ತದೆ. ಮನೆಯ ಸುತ್ತಲೂ ಹಸಿರು ಹಬ್ಬಿ ನಿಂತಿದೆ, ಹಸಿರೇ ಮಾತನಾಡುತ್ತಿದೆ ಇಷ್ಟು ಹಸಿರು ಮಾತನಾಡಬೇಕು ಅಂತಿದ್ರೆ ಮನೆಯೊಳಗೆ ಒಂದಷ್ಟು ಜನ ಇರಲೇಬೇಕು. ಹಾಗಂದುಕೊಂಡು ಒಳಕ್ಕೆ ಕಾಲಿಟ್ಟಾಗ ಮನೆಯೊಳಗೆ ಯಾರೂ ಕಾಣುತ್ತಿಲ್ಲ. ಅಂಗಳದಲ್ಲಿ ನಿಂತು ಗಿಡಗಳನ್ನೇ ಗಮನಿಸಿದೆ. ಹಸಿರು ಎದ್ದು ಕುಣಿಯುತ್ತಿದೆ. ಎಲ್ಲರೂ ತೊರೆದು ಹೊರಟಾಗ ಮನೆಯ ಯಜಮಾನನ ಜೊತೆಯಾದದ್ದೇ ಈ ಹಸಿರ ಬೀಜಗಳು. ಅಂಗಳದೊಳಗೆ ಬೇರಿಳಿಸಿ ಹಸಿರಾಗಿ ಬೆಳೆಯುತ್ತಿದೆ. ಏಕಾಂಗಿಯಾಗಿ ಬದುಕುತ್ತಿರುವ ಮನೆಯ ಯಜಮಾನ ಹಸಿರೊಂದಿಗೆ ಮಾತನಾಡುತ್ತಾ ದಿನವೂ ಜೀವಿಸುತ್ತಿದ್ದಾನೆ. ಗಿಡವನ್ನು ಬಾಂಧ್ಯಕ್ಕೆ ಬಳಸಿಕೊಂಡಿದ್ದಾನೆ. ಅವುಗಳು ಅವನಿಗೆ ದಿನವೂ ಕತೆ ಹೇಳುತ್ತವೆ. ಇದು ಅವನ ಬದುಕಿನ ಇನ್ನೊಂದು ಮಜಲು. ಮಕ್ಕಳು ತೊರೆದ ಮೇಲೆ ಹಸಿರೇ ಅವನ ಬಂಧುಗಳಾದವು. ಹಸಿರ ಬೆಳೆಸಿದ್ದಕ್ಕೆ ಪ್ರಾಣಿ ಪಕ್ಷಿಗಳು ಓಡಿ ಬಂದವು. ಸುತ್ತ ಮುತ್ತಲಿನ ಮಕ್ಕಳು ಜೊತೆಯಾದರೂ ಆತನ ಮಕ್ಕಳ ಸುದ್ದಿಯೇ ಇಲ್ಲ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ