ಸ್ಟೇಟಸ್ ಕತೆಗಳು (ಭಾಗ ೩೮೬) - ಪಯಣ

ಸ್ಟೇಟಸ್ ಕತೆಗಳು (ಭಾಗ ೩೮೬) - ಪಯಣ

ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದೆ. ಕತ್ತಲಿನ ಪಯಣ ಅಣ್ಣ ಬೈಕ್ ಬಿಡ್ತಾ ಇದ್ರು. ಈ ಕತ್ತಲಲ್ಲಿ ಹೆಚ್ಚಿನವರೆಲ್ಲ ಅವರ ಮನೆಯಲ್ಲಿರುತ್ತಾರೆ. ಹಾಗಾಗಿ ರಸ್ತೆಯಲ್ಲಿ ಅಷ್ಟೇನು ಗಾಡಿಗಳು ಓಡಾಡುವುದಿಲ್ಲ ಹಾಗಂದುಕೊಂಡು ಅಣ್ಣ ವೇಗವಾಗಿ ಹೋಗ್ತಾರೆ ಅಂತ ನಾನಂದುಕೊಂಡಿದ್ದೆ. ಇಲ್ಲ ಅವರು ಪ್ರತಿ ತಿರುವಿನಲ್ಲೂ, ಪ್ರತಿಯೊಂದು ಅಡ್ಡರಸ್ತೆ ಸೇರುವಲ್ಲಿ, ಮತ್ತೆ ರಸ್ತೆ ಮೇಲೂ ಕೂಡ ನಿಧಾನವಾಗಿ ಚಲಿಸುತ್ತಾ ಇದ್ರು. ಹೊಂಡ ಗುಂಡಿಗಳು, ಏರುತಗ್ಗುಗಳನ್ನು ನಿಧಾನವಾಗಿ ದಾಟಿಸುತ್ತಿದ್ದರು. ಖಾಲಿ ರಸ್ತೆ ಹಾಗಾಗಿ ವೇಗವಾಗಿ ಚಲಿಸುವ ಅಂದುಕೊಂಡು ಒಟ್ಟಾರೆಯಾಗಿ ಚಲಿಸಲಿಲ್ಲ. ನನ್ನ ಜಾಗಕ್ಕೆ ತಲುಪಿಸಿ ಅವರ ಮನೆಗೆ ಹೊರಟರು. ಜೀವನ ಪಯಣದಲ್ಲೂ ಕೂಡಾ ಯಾವುದೇ ಅಡೆತಡೆಗಳಿಲ್ಲ, ಗುಂಡಿಗಳಿಲ್ಲಾ, ನಮ್ಮದೇ ರಸ್ತೆ ಇಷ್ಟಬಂದ ಹಾಗೆ ಹೋಗಬಹುದು ಅಂದುಕೊಂಡು ಜೀವನ ಪಯಣವನ್ನು ಆರಂಭಿಸಿದರೆ, ರಸ್ತೆಗಳಲ್ಲಿ, ಮುಂದಿನ ತಿರುವಲ್ಲಿ, ಯಾವ ಅವಘಡ, ಯಾವ ತೊಂದರೆ ಬರುತ್ತದೆ ಅನ್ನೋದು ನಮ್ಮ ಅರಿವಿಗೆ ಬರೋದಿಲ್ಲ. ಕಷ್ಟದ ಹೊಂಡ ಗುಂಡಿಗಳು ನೀರು ತುಂಬಿರುತ್ತವೆ, ಇದ್ಯಾವುದೂ ನಮ್ಮ ಅರಿವಿಗೆ ಬರೋದಿಲ್ಲ. ಅದರಿಂದ ತೊಂದರೆ ಅನುಭವಿಸುವುದು ನಾವು. ಜೀವನ ಪಯಣವನ್ನು ಮುಂದುವರಿಸದ ಪರಿಸ್ಥಿತಿಯೂ ಬರಬಹುದು. ಚಾಲನೆಯಲ್ಲಿ ತುಂಬಾ ಜಾಗರೂಕತೆಯಿಂದ ಚಲಿಸುವ ಅವಶ್ಯಕತೆ ಇದೆ ಅಲ್ವಾ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ