ಸ್ಟೇಟಸ್ ಕತೆಗಳು (ಭಾಗ ೩೮೯) - ಅವನು
ಅಬ್ಬಾ... ಇವನು ತುಂಬಾ ಭಯಂಕರ ಮಾರ್ರೆ... ಏನೆಲ್ಲಾ ಆಟಾಡಿಸ್ತಾನೆ. ನಾನು ಅಂದುಕೊಂಡಿರಲೇ ಇಲ್ಲ. ಅವನಲ್ಲಿ ಇಷ್ಟೆಲ್ಲಾ ಶಕ್ತಿ ಇದೆ ಅಂತಾ. ಅವನು ಕಣ್ಣಿಗೆ ಕಾಣ್ಸೋದಿಲ್ಲ. ,ಅವನ ಮಾತು ಕೇಳ್ಸೋದಿಲ್ಲ. ಆದರ ಆಜ್ಞೆ ಮಾಡ್ತಾ ಕೋಡ್ತಾ ಇರ್ತಾನೆ. ನಾನದನ್ನ ಪಾಲಿಸ್ತೇನೆ ಕೂಡಾ. ನನಗೆ ಎಲ್ಲೂ ಅವನ ವಿರುದ್ದ ಮಾತಾಡಬೇಕು ಅನ್ನಿಸಲೇ ಇಲ್ಲ. ಹೋ ಅವನ್ಯಾರು ಅಂತಾನಾ... ನನ್ನೊಳಗೆ ಒಬ್ಬನಿದ್ದಾನೆ. ಅವನೇ... ನನ್ನ ಅಟವಾಡಿಸುತ್ತಿರುವವನು. ಬೆಳಗ್ಗೆ ಬೇಗ ಏಳುತ್ತೇನೆ ತಕ್ಷಣ ಅವನು" ಇಷ್ಟು ಬೇಗ ಎದ್ದು ಏನು ಮಾಡ್ತೀಯಾ , ಮಲ್ಕೋ ಸ್ಬಲ್ಪ, ಅದೇನು ಗಂಟು ಹೋಗುತ್ತೆ ಅಂತ ಮಲಗಿದ್ರೆ. " "ನಾಳೆ ಮಾಡಿದರಾಯ್ತು ಕೆಲಸ ಇವತ್ತೇ ಅಗಬೇಕಂತ ಏನೂ ಇಲ್ಲ".
"ಇನ್ನೂ ಸಮಯ ಇದೆ, ಸುಮ್ನೆ ಇವತ್ತೇ ಎಲ್ಲಾ ಮುಗಿಸಬೇಡ". ಹೀಗೆ ನನ್ನನ್ನ ಮುಂದುವರಿಯದ ಹಾಗೇ ಮಾಡ್ತಾನೆ. ಅವನಿಗೆ ಇದರಿಂದ ಅದೇನು ಖುಷಿ ಸಿಗುತ್ತೋ ಗೊತ್ತಿಲ್ಲ. ಅವನು ನನ್ನೊಳಗೆ ಇರಬಾರದು. ಏನು ಮಾಡಬೇಕು. ಆದರೂ ಕೆಲವೊಮ್ಮೆ ಅವನು ಹೇಳುವ ಮಾತುಗಳೇ ನನ್ನನ್ನ ಗೆಲುವಿನ ಕಡೆಗೆ ಕೊಂಡೊಯ್ಯುತ್ತದೆ. ಹೀಗಿರುವಾಗ ಅವನು ನನ್ನೊಳಗೆ ಇದ್ರೆ ಒಳ್ಳೇದಲ್ವಾ? ಈಗ ಏನು ಮಾಡಲಿ ...ನಿಮಗೇನು ಅನ್ನಿಸುತ್ತೆ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ