ಸ್ಟೇಟಸ್ ಕತೆಗಳು (ಭಾಗ ೩೯೦) - ಬೀದಿ ದೀಪ
ಕತ್ತಲೆಯ ದಾರಿಯಲ್ಲಿ ದಾರಿ ದೀಪಗಳು ಬೆಳಕು ನೀಡುತ್ತಿವೆ. ಎಲ್ಲವೂ ಒಂದೇ ತರನಾದ ಬೆಳಕು ನೀಡುತ್ತಿಲ್ಲ. ಒಂದೊಂದರದ್ದೂ ಒಂದೊಂದು. ಕೆಲವು ಹಾಳಾಗಿ ನಿಂತಿದೆ. ಕೆಲವೊಂದು ಹೊಸತಾಗಿ ಮಿನುಗುತ್ತಿವೆ. ಆದರೆ ಯಾವ ದೀಪವೂ ಕೂಡ ತಾನೇ ಹೆಚ್ಚು ಬೆಳಕು ಕೊಡಬೇಕು ಅಂತ ಬಯಸ್ತಾ ಇಲ್ಲ, ನಾನು ಬೆಳಕು ಕೊಡುವುದರಿಂದ ಎಲ್ಲರೂ ಬದುಕುತ್ತಿದ್ದಾರೆ ನಾನಿನ್ನು ಮುಂದೆ ನೀಡುವುದಿಲ್ಲ ಅಂತ ನಿರ್ಧಾರ ಮಾಡಿಲ್ಲ. ಸಾಮರ್ಥ್ಯವಿರುವವರೆಗೆ ತನಗೆ ಕೊಟ್ಟ ಕೆಲಸವನ್ನು ಪ್ರೀತಿಯಿಂದ, ಜವಾಬ್ದಾರಿ ವಹಿಸಿ ಮಾಡುತ್ತಿದೆ. ಹಾಗಾಗಿ ಅದರ ಬೆಳಕಿನಲ್ಲಿ ನಡೆಯುವ ಹಲವರು ಮನೆ ತಲುಪಿದ್ದಾರೆ. ಮನೆ ತಲುಪಿದವರು ಯಾರೂ ಕೂಡ ಜೀವನಪೂರ್ತಿ ಅದೇ ಬೀದಿ ದೀಪದ ಬೆಳಕನ್ನು ನೆನಪಿಟ್ಟು ಕೊಂಡಿಲ್ಲ. ನೆನಪಿಟ್ಟುಕೊಂಡಿಲ್ಲ ಅನ್ನುವ ಕಾರಣಕ್ಕೆ ಮರುದಿನದಿಂದ ಬೀದಿ ದೀಪ ಬೆಳಕು ನೀಡುವುದನ್ನು ಬಿಟ್ಟಿಲ್ಲ. ಬೀದಿದೀಪದ ಜೀವನ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು, ಆ ದಿನ ಮುಗಿಸುವುದು. ಬೀದಿದೀಪ ಕಲಿಸಿದ ಪಾಠ ನನಗೆ ದಾರಿದೀಪವಾಯಿತು. ಅದ್ಭುತವನ್ನು ಏನಾದರೂ ಸಾಧಿಸೋಕೆ ಸಾಧ್ಯವಾಗದಿದ್ದರೂ ಬೀದಿದೀಪದ ಹಾಗೆಯೇ ಬದುಕುತ್ತೇನೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ