ಸ್ಟೇಟಸ್ ಕತೆಗಳು (ಭಾಗ ೩೯೩) - ಅನಿರೀಕ್ಷಿತ
ಜೀವನದಲ್ಲಿ ಅನಿರೀಕ್ಷಿತವಾಗಿ ಘಟನೆಗಳು ಆಗಾಗ ಉದ್ಭವಿಸುತ್ತಿರಬೇಕು. ಇಲ್ಲದಿದ್ದರೆ ಜೀವನ ನೇರ ದಾರಿಯ ಪಯಣವಾಗಿರುತ್ತದೆ. ತಿರುವುಗಳ ಪಯಣವಾದಾಗ ಎದುರಿನಿಂದ ಬರುತ್ತಿರುವ ಗಾಡಿಯದ್ದಾಗಲಿ, ವ್ಯಕ್ತಿಯದ್ದಾಗಲಿ ಯಾವುದೇ ರೀತಿಯ ಮಾಹಿತಿಯೂ ನಮ್ಮಲ್ಲಿರುವುದಿಲ್ಲ. ಆ ಸಂದರ್ಭದಲ್ಲಿ ಹೊಸತೊಂದು ಆರಂಭ, ಬದುಕು ಎಚ್ಚರದಲ್ಲಿರುತ್ತದೆ. ಹಾಗೆ ಪ್ರತಿದಿನದ ಜೀವನದಲ್ಲೂ ಒಂದಷ್ಟು ಅನಿರೀಕ್ಷಿತವಾಗಿ ಇರುವಂತಹ ಘಟನೆಗಳು ನಡೆದಾಗ ಮತ್ತಷ್ಟು ಬದುಕನ್ನ ಎಚ್ಚರವಾಗಿ ನೋಡುತ್ತೇವೆ. ಜೊತೆಗೆ ಸುಂದರವಾಗಿಯೂ ಕಾಣುತ್ತೇವೆ. ಎಲ್ಲವೂ ನಿರೀಕ್ಷಿಸಿದಂತೆ ನಡೆದರೆ ಅದು ಸುಂದರವಾದ ಮತ್ತು ಅದ್ಭುತ ಜೀವನವಲ್ಲ. ಇವತ್ತು ಅನಿರೀಕ್ಷಿತವಾಗಿ ಸಿಕ್ಕ ಗೆಳೆಯರು ಹೊಸ ಹೊಸ ಸುದ್ದಿಗಳನ್ನು ತಿಳಿಸಿದರು. ಬದುಕಿನ ಇನ್ನೊಂದಷ್ಟು ಹೆಜ್ಜೆಗಳಿಗೆ ಸ್ಫೂರ್ತಿಯಾಗುವ ಮಾತನ್ನಾಡಿದರು. ಮೊದಲೇ ನಿರೀಕ್ಷಿಸಿದರೆ ಇವತ್ತು ಇಷ್ಟೊಂದು ವಿಚಾರಗಳು ನಮ್ಮ ನಡುವೆ ಹಾದು ಹೋಗುತ್ತಿರಲಿಲ್ಲ. ಹಾಗಾಗಿ ನನಗೆ ಅನಿರೀಕ್ಷಿತೆಯಿಂದ ಸಂತಸವಿದೆ. ಬದುಕಿನ ಬದಲಾವಣೆಯ ಬಗ್ಗೆ ಹೆಮ್ಮೆಯಿದೆ ನಿಮ್ಮ ಅನಿರೀಕ್ಷಿತಗಳು ಹೇಗಿರುತ್ತವೆ ....?
-ಧೀರಜ್ ಬೆಳ್ಳಾರೆ
ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ