ಸ್ಟೇಟಸ್ ಕತೆಗಳು (ಭಾಗ ೩೯೭) - ನಮ್ಮೊಳಗೆ

ಸ್ಟೇಟಸ್ ಕತೆಗಳು (ಭಾಗ ೩೯೭) - ನಮ್ಮೊಳಗೆ

ಅಲ್ಲ ನಮ್ಮೊಳಗೊಬ್ಬ ಸದಾ ಜೀವಂತವಾಗಿರುತ್ತಾನೆ. ಅವನು ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಿರುತ್ತಾನೆ. ಜೊತೆಗೆ ಅವನಿಗೆ ಅವನದೇ ಆದ ಒಂದಷ್ಟು ಯೋಚನೆಗಳು ಕೂಡ ಇದ್ದಾವೆ. ಹೀಗಿರುವಾಗ ಅವನು ನಮ್ಮೊಳಗೆ ಕುಳಿತು ಹೀಗೆ ಆಲೋಚಿಸ ಬಹುದಲ್ಲವೇ?..

"ನೀನು ನಿನಗಿಷ್ಟವಾದ ನಿರ್ಧಾರವನ್ನ ತೆಗೆದುಕೊಂಡಿದ್ದೀಯಾ, ಭವಿಷ್ಯದ ಕೆಲವೊಂದು ಯೋಚನೆಗಳಿಲ್ಲದೆ ನಿನ್ನ ಮನಬಂದಂತೆ ವರ್ತಿಸುತ್ತಿದ್ದೀಯಾ? ಇವೆಲ್ಲದಕ್ಕೂ ಉತ್ತರವನ್ನ ಪ್ರತಿಫಲವನ್ನು ಅನುಭವಿಸಿಯೇ ತೀರ್ತೀಯಾ. ನೀನು ನನ್ನ ಮಾತನ್ನು ಕೇಳದೆ ಇದ್ದಾಗ ,ನಿನ್ನದೇ ನಿರ್ಧಾರಗಳು ನಿನ್ನ ಜೀವನವನ್ನ ರೂಪಿಸುವ ದಿನಗಳು ದೂರವಿಲ್ಲ. ನಿನ್ನ ಬದುಕಿನ ಅಧೋಗತಿಯ ಕ್ಷಣಗಳೆಲ್ಲವೂ ಕಣ್ಣ ಮುಂದೆ ಬರುತ್ತವೆ. ಹಾಗಾಗಿ ಅವರು ಏನು ಯೋಚಿಸುತ್ತಾರೆ ಎನ್ನುವ ಆಲೋಚನೆಗಿಂತ ನಿನ್ನೊಳಗಿನ ಆಲೋಚನೆ ಏನು ಅನ್ನೋದನ್ನ ಅರ್ಥಮಾಡಿಕೊಂಡಾಗ ನಿನ್ನ ಬದುಕು ಖಂಡಿತವಾಗಿಯೂ ಸುಂದರವಾಗಿರುತ್ತದೆ. ಹಾಗಾಗಿ ಒಂದು ಸಲ ಒಳಗಿಣುಕಿ ನೋಡು, ನನ್ನ ಮಾತನ್ನು ಕೇಳು, ನಾನು ನಿನಗೆ ನಿನ್ನ ಜೀವನ ಸರಿಯಾದ ಹಾದಿಯಲ್ಲಿ ನಡೆಯುವ ಮಾತನ್ನ ಹೇಳುತ್ತೇನೆ. ಊರವರ ಮಾತಿಗಿಂತ ನಿನ್ನೊಳಗಿನ ಮಾತು ತುಂಬಾ ಸತ್ಯವಾದದ್ದು ಮತ್ತು ನಿನ್ನ ಬದುಕಿಗೆ ಹತ್ತಿರವಾದದ್ದು."  ಹೀಗೆ ಮಾತನಾಡಿ ಅವನು ಮೌನವಾಗಿ ಬಿಟ್ಟ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ