ಸ್ಟೇಟಸ್ ಕತೆಗಳು (ಭಾಗ ೩೯೯) - ಆತ

ಸ್ಟೇಟಸ್ ಕತೆಗಳು (ಭಾಗ ೩೯೯) - ಆತ

ಅವನು ಎಂದಿನಂತಿಲ್ಲ ತುಂಬಾ ಬದಲಾಗಿದ್ದಾನೆ. ಮುಂಚೆ ಇದ್ದ ಅವನು ಮನೆಗೆ ಮಗಳು ಬಂದ ಮೇಲೆ ಇನ್ನಷ್ಟು ಉತ್ಸಾಹ ಹೆಚ್ಚಿಸಿಕೊಂಡಿದ್ದಾನೆ. ಆ ದಿನ ಮಗಳು ಮನೆಗೆ ಕಾಲಿಡುವ ಸಮಯ ಆತನೊಳಗೆ ಭವಿಷ್ಯದ ಹಲವು ಕನಸುಗಳು ಚಿಟ್ಟೆಯಾಗಿ ಹಾರಿ ಮುಗಿಲೆತ್ತರದಲ್ಲಿ ತೇಲಾಡುತ್ತಿವೆ. ಅವಳ ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ಅವಳು ಅದ್ಭುತವಾಗಿ ಅನುಭವಿಸಬೇಕು ಅನ್ನುವ ಕನಸಿನ ಗೋಪುರವನ್ನು ಕಟ್ಟಿ ಬದುಕುತ್ತಿದ್ದಾನೆ. ಇಷ್ಟರವರೆಗೂ ಪ್ರೀತಿಯನ್ನ ತಂದೆ-ತಾಯಿಯ ಅಣ್ಣ-ಅತ್ತಿಗೆ ಹೆಂಡತಿಯರಿಗೆ ಹಂಚಿಕೊಂಡಿದ್ದ. ಈಗ ಸ್ವಲ್ಪ ಹೆಚ್ಚಾಗಿ ತನ್ನ ಮಗಳ ಕಡೆಗೆ ವಾಲಿಸಿಕೊಂಡಿದ್ದಾನೆ. ಈಗ ಅವನ ಬದುಕಿಗೆ ಪೂರ್ತಿ ಬಣ್ಣವನ್ನು ತುಂಬಿದ ಅವಳ ನಗುವಿಗಾಗಿ ತನ್ನ ದುಡಿಮೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾನೆ. ಹೊಸತರದ ಆಲೋಚನೆಗಳೊಂದಿಗೆ ಅವಳ ಬದುಕನ್ನ ಅಂದಗೊಳಿಸುವುದಕ್ಕೆ ಶ್ರಮವಹಿಸುತ್ತಿದ್ದಾನೆ. ಹಿಂದಿಗಿಂತಲೂ ಅದ್ಭುತವಾಗಿ ತನ್ನ ಮುದ್ದು ಮಗಳ ಅದ್ಭುತ ಬದುಕಿಗಾಗಿ ಬದುಕುತ್ತಿದ್ದಾನೆ. ಅವಳಿನ್ನೂ ಹಾಲುಗಲ್ಲದ ಹಸುಳೆ, ಕುತೂಹಲದ ಕಣ್ಣಿನಿಂದ ಗಮನಿಸುವುದಷ್ಟೆ ಅವಳ ಕೆಲಸ. ಆ ಕುತೂಹಲವನ್ನು ಜೀವನ ಪೂರ್ತಿ ನೀಡುವ ಭರವಸೆಯೊಂದೇ ಅವನ ಇನ್ನಷ್ಟು ಉತ್ಸಾಹದಿಂದ ಬದುಕಿಸಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ