ಸ್ಟೇಟಸ್ ಕತೆಗಳು (ಭಾಗ ೪೦೨) - ಹುಟ್ಟು ಹಬ್ಬ
ಹುಟ್ಟುಹಬ್ಬ ಅಂದ್ರೇನು ಅಂತ ಹೀಗೆ ಯೋಚನೆ ಮಾಡ್ತಾ ಇದ್ದೆ. ವರ್ಷಕ್ಕೊಂದು ಸಲ ಈ ಹುಟ್ಟುಹಬ್ಬ ಬರುತ್ತೆ ಅದಕ್ಕೊಂದಷ್ಟು ಆಚರಣೆಗಳು ಕೂಡ ಆಗುತ್ತದೆ. ಖರ್ಚು ಕೂಡ ಆಗುತ್ತದೆ ಹೀಗಿರುವಾಗ, ಆ ದಿನವನ್ನ ಹೇಗೆ ಆಚರಿಸುವುದು?
ನನ್ನ ಪ್ರಕಾರ ಅದು ನಮಗೂ ಸಾಗಿ ಬಂದ ದಾರಿಯನ್ನ ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ. ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆ ಹಿಂದಿನ ವರ್ಷಕ್ಕಿಂತ ಈ ವರ್ಷ ಹೊಸತೇನನ್ನ ಮಾಡಿದ್ದೇವೆ?, ನನ್ನ ಹೆಜ್ಜೆಗಳು ಎಷ್ಟು ಮುಂದುವರೆದಿದ್ದಾವೆ, ಎಷ್ಟು ಜನರು ಜೊತೆಗೂಡಿದ್ದಾರೆ, ಎಷ್ಟು ಜನ ಬಿಟ್ಟುಹೋಗಿದ್ದಾರೆ, ಅವರು ದೂರ ಸರಿಯೋದಕ್ಕೆ ಕಾರಣ ನನ್ನ ತಪ್ಪುಗಳೋ ಅಥವಾ ಅವರ ನಿರ್ಧಾರಗಳೋ?, ಇವೆಲ್ಲವನ್ನು ಕ್ರೂಢೀಕರಿಸಿಕೊಂಡು ಒಂದು ದಿನ ಯೋಚನೆ ಮಾಡಿಕೊಂಡು ಹೆಜ್ಜೆಗಳು ಸರಿಯಾಗಿದ್ದರೆ ಇನ್ನಷ್ಟು ದೊಡ್ಡ ಹೆಜ್ಜೆಗಳೊಂದಿಗೆ ಮುಂದುವರಿಯುವುದು. ಹೆಜ್ಜೆ ತಪ್ಪಿದ್ದಲ್ಲಿ, ಒಂದಷ್ಟು ಕ್ಷಮೆ ಕೇಳಿ ಮತ್ತೆ ಬಾಂಧವ್ಯ ಗಟ್ಟಿಮಾಡಿಕೊಂಡು ಮುಂದಿನ ವರ್ಷಕ್ಕೆ ಹೊಸತೊಂದು ಸರಿದಾರಿಯಲ್ಲಿ ನಡೆಯಲು ಆಗುತ್ತಾ ಅಂತ ನಿರ್ಧಾರ ಮಾಡೋದು. ಎಲ್ಲ ವಿಚಾರಗಳನ್ನು ಒಟ್ಟಿಗೆ ಯೋಚನೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಈ ದಿನವನ್ನು ಬಳಸಿಕೊಳ್ಳಬಹುದು ಅನಿಸ್ತು. ಹಾಗಾಗಿ ಹುಟ್ಟುಹಬ್ಬವನ್ನ ಬದುಕಿನ ಹಬ್ಬ ಮಾಡೋದಕ್ಕೆ ಈ ದಿನವನ್ನು ಬಳಸಿಕೊಳ್ಳುವುದು ಒಳಿತು. ಅಲ್ವಾ, ನೀವೇನಂತೀರಿ?..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ