ಸ್ಟೇಟಸ್ ಕತೆಗಳು (ಭಾಗ ೪೧೩) - ಗಡಿಯಾರ

ಹೆಜ್ಜೆಗಳೆಷ್ಟಾಗಿದೆ ಅನ್ನೋದು ಮುಖ್ಯ ಅಲ್ಲ. ಇಟ್ಟ ಹೆಜ್ಜೆ ಎಷ್ಟು ದೃಢವಾಗಿದೆ, ಎಷ್ಟು ತಾಳ್ಮೆ ಸಹನೆ ಪರಿಶ್ರಮ ಇದೆ ಅನ್ನೋದು ತುಂಬಾ ಮುಖ್ಯ. ಗಡಿಯಾರದೊಳಗಿನ ಎಲ್ಲಾ ಮುಳ್ಳುಗಳು ಸಮಯದ ಚಲಿಸುವಿಕೆಗೆ ಸಹಾಯ ಮಾಡುತ್ತಿರುತ್ತದೆ. ಒಂದೊದರದ್ದು ಒಂದೊಂದೂ ಆಕಾರ. ಒಂದೊಂದರದ್ದು ವೇಗಗಳೇ ಬೇರೆ ಬೇರೆ. ಆಗಾಗ ಜೊತೆಯಾಗಿ ಮತ್ತೆ ಮುಂದುವರೆಯುತ್ತವೆ. ಮೂಲದಲ್ಲಿ ಒಂದೇ ಯೋಚನೆಗಳನ್ನ ಹೊಂದಿಕೊಂಡು ಮುಂದುವರೆಯುತ್ತವೆ. ಮುಳ್ಳುಗಳಲ್ಲಿ ಕೆಲವು ಒಂದು ಹೆಜ್ಜೆಗೆ ಗಂಟೆಗಳು ಬದಲಾದರೆ, ಇನ್ನುಳಿದದ್ದು ನಿಮಿಷ ಸೆಕುಂಡುಗಳು ಮಾತ್ರ ಬದಲಾಗುತ್ತವೆ. ನನ್ನ ಮನೆ ಗಡಿಯಾರ ನನಗೆ ಹೇಳಿಕೊಟ್ಟಿದ್ದಿಷ್ಟೆ. ಸಾಗಬೇಕು ಎಲ್ಲರೂ ಸಾಗ್ತಾ ಇದ್ದರೆ ಅಂದುಕೊಂಡು ಅವರ ಬೆನ್ನು ಬೀಳೋದಲ್ಲ. ನಿನ್ನ ದಾರಿ ನಿನ್ನ ಸಾಮರ್ಥವನ್ನ ಅವಲಂಬಿಸಿರುತ್ತದೆ. ಅನುಸರಿಸಬೇಡ, ಅನುಕರಿಸಬೇಡ ನಿನ್ನದೇ ದಾರಿ ಹುಡುಕು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ