ಸ್ಟೇಟಸ್ ಕತೆಗಳು (ಭಾಗ ೪೧೪) - ಖುಷಿ

ದೊಡ್ಡ ಅಂಗಡಿಗಳು ತೆರೆದಿರುತ್ತದೆ. ನಮ್ಮ ಅಗತ್ಯದ ವಸ್ತುಗಳನ್ನು ಖರೀದಿಸಲು ಹೋಗಿ ಇನ್ನೊಂದಷ್ಟು ಹೊಸ ವಸ್ತುಗಳು ಮನಸ್ಸನ್ನು ಸೆಳೆಯುತ್ತವೆ. ಕಿಸೆಲ್ಲೊಂದಿಷ್ಟು ದುಡ್ಡಿದ್ದರೆ ಅಗತ್ಯದ ಜೊತೆ ಅನಗತ್ಯ ವಸ್ತುಗಳು ಬ್ಯಾಗು ತುಂಬುತ್ತವೆ. ಕೆಲವೊಮ್ಮೆ ಅಂಗಡಿ ತಲುಪಿದಾಗ ಅಗತ್ಯದ ವಸ್ತುವನ್ನು ಖರೀದಿಸಲಾಗದಷ್ಟು ಅದರ ಬೆಲೆ ಏರಿರುತ್ತದೆ ಅಥವಾ ಕಿಸೆ ಖಾಲಿಯಾಗಿರುತ್ತದೆ. ನಮ್ಮ ಇಷ್ಟಗಳು ನಮ್ಮ ಚೌಕಟ್ಟಿನೊಳಗೆ ಇದ್ದಾಗ ಬದುಕು ಸುಂದರ ಅಂತ ಅನ್ನಿಸುತ್ತದೆ. ಇಲ್ಲವಾದರೆ ಇಷ್ಟು ದಿನ ಬದುಕಿನ ಅರ್ಥ ಏನು ಅಥವಾ ಬದುಕುತ್ತಿರುವ ರೀತಿ ತಪ್ಪಾ ಎಲ್ಲ ಪ್ರಶ್ನೆಗಳು ಮತ್ತೆ ಮತ್ತೆ ಮೂಡುತ್ತದೆ. ಒಟ್ಟಿನಲ್ಲಿ ಜೀವನದಲ್ಲಿ ಎಲ್ಲವೂ ಖುಷಿಯಾಗಿರುವುದು ಇಲ್ಲ. ಕೆಲವೊಂದು ಖುಷಿಗಳು ಜೊತೆಗಿರುತ್ತವೆ, ಕೆಲವೊಂದು ಎಟುಕಲಾರದಷ್ಟು ಎತ್ತರದಲ್ಲಿರುತ್ತದೆ. ಆದರೆ ಎತ್ತರದಲ್ಲಿ ಇರುವುದನ್ನು ಪಡೆಯುವುದಕ್ಕೆ ಸತತವಾಗಿ ಪ್ರಯತ್ನಿಸುವುದೇ ಬದುಕು. ಹಾಗೆಯೇ ಆ ಪ್ರಯತ್ನವನ್ನೇ ಪಡುತ್ತಾ ಜೊತೆಗಿರವ ಖುಷಿಯನ್ನು ಮರೆತು ಬಿಡಬಾರದು. ಈ ಎಲ್ಲಾ ಯೋಚನೆಗಳು ಇವತ್ತು ಒಂದು ದೊಡ್ಡ ಅಂಗಡಿಯ ಒಳಗೆ ಹೋಗಿ ಹೊರಬಂದಾಗ ಅನಿಸಿದ್ದು....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ