ಸ್ಟೇಟಸ್ ಕತೆಗಳು (ಭಾಗ ೪೧೭) - ಅನಿವಾರ್ಯತೆ

"ಗಂಟೆ 11 ದಾಟಿದೆ ಇನ್ನು ಕೂಡ ಅದೇನು ಹೊಲಿತಾ ಇದ್ದೀರಾ? ಮನೆಗೆ ಹೋಗಲ್ವಾ ? ಅಷ್ಟು ಕೆಲಸ ಯಾಕ್ ತಗೋಬೇಕು? ನಾಳೆ ಬೆಳಿಗ್ಗೆ ಮುಗಿಸಿದರೆ ಆಗೋದಿಲ್ವಾ ಸರ್?"
"ನಾನು ಇಲ್ಲಿ ಬಟ್ಟೆಗಳನ್ನು ಹೊಲಿದು ಅಂದವಾಗಿ ಜೋಡಿಸಿಟ್ಟರೆ ನನ್ನ ಬದುಕು ಕೂಡ ನೆಮ್ಮದಿಯಿಂದ ಉಸಿರಾಡುತ್ತದೆ. ಟೈಲರ್ ಮಿಷನ್ ತುಳಿದಷ್ಟು ವೇಗವಾಗಿ ಜೀವನಚಕ್ರ ಓಡುತ್ತಿರುತ್ತದೆ. ಕಷ್ಟ ಇದೆ ಸರ್ ದುಡಿಮೆ ಅನಿವಾರ್ಯ. ಮನೆಗೆ ಹೋಗ್ಬೇಕು ಅವರ ಜೊತೆಗಿರಬೇಕು ಹೀಗೆ ಏನೇನೋ ಆಸೆ ಇದೆ. ಆದರೆ ಮಕ್ಕಳ ಶಾಲೆಯ ಶಾಲೆಯ ಖರ್ಚು, ತಿಂಗಳ ಖರ್ಚು, ಇದೆಲ್ಲಾ ನೋಡುವಾಗ ಒಂದಷ್ಟು ನಿದ್ದೆ ಇಲ್ಲದ ರಾತ್ರಿಗಳು ಆಗೇ ಹೋಗಲಿ... ಮುಂದೊಂದು ದಿನ ನೆಮ್ಮದಿಯಲ್ಲಿ ಕಣ್ಣುಮುಚ್ಚೋದು ಇದೆ ಅಲ್ವಾ? ನಾನು ಇರುವವರೆಗೆ ಮಕ್ಕಳು ಯಾವುದಕ್ಕೂ ಇಲ್ಲ ಅಂತ ಕಷ್ಟಪಡಬಾರದು. ಅವರ ನೆಮ್ಮದಿಯ ನಿದ್ದೆಗೆ ನನ್ನ ಒಂದೆರಡು ನಿದ್ದೆ ಹಾಳಾದರೆ ಅದೇನು ದೊಡ್ಡದಲ್ಲ? ಬಿಡಿ ಸರ್ ಮತ್ತೆ ."
ಅಂಗಿಗೆ ಗುಬ್ಬಿ ಹಾಕೋ ಕಾರ್ಯ ಮುಂದುವರೆಸಿದರು. ಸದ್ಯಕ್ಕೆ ಮನೆಗೆ ಹೋಗುವ ಯಾವ ಲಕ್ಷಣವೂ ಕಾಣಲಿಲ್ಲ. ಕೆಲವರ ಅನಿವಾರ್ಯತೆಯ ಬದುಕು ಹೀಗಿರುತ್ತದೆ .
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ