ಸ್ಟೇಟಸ್ ಕತೆಗಳು (ಭಾಗ ೪೧೯) - ಪಯಣ

ಪಯಣ ಎಲ್ಲರಿಗೂ ಇಷ್ಟವಾಗುವಂತದ್ದು. ಇದಕ್ಕೆ ಎರಡು ಮಾರ್ಗಗಳು. ಒಂದಾದರೆ ನಮಗೆ ತಲುಪುವ ಜಾಗ ಇಷ್ಟ ಇರಬೇಕು ಅದಕ್ಕಾಗಿ ನಡೆಯೋದಕ್ಕೆ ಆರಂಭ ಮಾಡುತ್ತೇವೆ ಅಥವಾ ತಲುಪುವ ಜಾಗದ ಬಗ್ಗೆ ಗೊತ್ತಿಲ್ಲದಿದ್ದರೂ ನಮ್ಮ ಜೊತೆಗಿರುವವರ ಮೇಲೆ ಪ್ರೀತಿ ಇರಬೇಕು. ಹಾಗಾದಾಗ ಅದೇ ಖುಷಿಯಿಂದ ಜಾಗವನ್ನು ತಲುಪುತ್ತೇವೆ. ಹೆಚ್ಚಾಗಿ ನಾವು ಯಾರ ಜೊತೆಗಿದ್ದೇವೆ ಅನ್ನೋದು ನಮ್ಮ ಪಯಣವನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಜೀವನಪೂರ್ತಿ ನೆನಪಿಸಿಕೊಳ್ಳುವ ಹಾಗೆ ಮಾಡುತ್ತೆ. ದಾರಿತಪ್ಪಿ ಕಂಗಾಲಾದಾಗ ನಮ್ಮ ಜೊತೆಗಿರುವರು ನಮ್ಮನ್ನು ಸರಿದಾರಿಗೆ ಕರೆದೊಯ್ಯುವವರಾಗಿರಬೇಕು.
ನಮಗೆ ಯಾರಾದ್ರೂ ದಾರಿ ತೋರಿಸಬೇಕು ಜೊತೆಗೆ ಇರಬೇಕು ಅಂತ ಬಯಸುತ್ತೇವೋ ಹಾಗೆಯೇ ನಾವು ಯಾರಿಗೂ ಜೊತೆಗಾರರೋ ಅವರ ದಾರಿಗೂ ಒಂದಿಷ್ಟು ಬೆಳಕು ಸಿಗುವುದು .ಹಾಗಾಗಿ ತುಂಬಾ ಮುಖ್ಯವಾಗುವುದು ನಾವು ಸಾಗುತ್ತಿರುವ ಹಾದಿಯಲ್ಲಿ ನಾವು ತಲುಪಬೇಕಾದ ಗುರಿಗೆ ಯಾರ ಜೊತೆ ಸಾಗುತ್ತಿದ್ದೇವೆ ಅನ್ನೋದು. ಅದರಿಂದಲೇ ನಮ್ಮ ಚಲಿಸುವ ವೇಗ, ತಲುಪುವ ಸಮಯ ನಿರ್ಧಾರವಾಗಿರುತ್ತದೆ. ಇದು ಹೌದಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ