ಸ್ಟೇಟಸ್ ಕತೆಗಳು (ಭಾಗ ೪೨೬) - ಪರಿಧಿ

ಸ್ಟೇಟಸ್ ಕತೆಗಳು (ಭಾಗ ೪೨೬) - ಪರಿಧಿ

ಉದ್ದ ಟಾರುರಸ್ತೆ, ರಸ್ತೆಯ ಎರಡೂ ಬದಿಗಳಿಗೆ ಬಿಳಿಯ ಗೆರೆಗಳನ್ನು ಹಾಕಿದ್ದಾರೆ. ಕಪ್ಪಗಿನ ರೋಡಿನ ಮೇಲೆ ಬಿಳಿಗೆರೆಗಳು ಎದ್ದು ಕಾಣುತ್ತಿದ್ದಾವೆ. ವೇಗವಾಗಿ ಸಾಕುವವರಿಗೆ, ದೂರದೂರಿಗೆ ತಲುಪುವವರಿಗೆ, ತಾವು ಸಾಗಬೇಕಾದ ಪರಿಧಿಗಳ ಅರಿವಿರಬೇಕು. ಸಾಗುತ್ತಿರುವ ವೇಗಕ್ಕೆ ಪರಿಧಿಗಳು ತಿಳಿದಿಲ್ಲವಾದರೆ ಗಾಡಿ ದಿಕ್ಕುತಪ್ಪಿ ಅಫಘಾತ ಉಂಟಾಗಬಹುದು.  ಪ್ರಾಣವೇ ಹೋಗಬಹುದು. ಹಾಗೆ ನಮ್ಮ ಜೀವನದ ದಾರಿಯಲ್ಲಿ ಒಂದಷ್ಟು ಪರಿದಿಗಳಿರುತ್ತವೆ, ಚೌಕಟ್ಟುಗಳು ಇರುತ್ತವೆ. ಅವುಗಳೊಳಗೆ ಸಾಗಿದಾಗ ಮಾತ್ರ ಬದುಕು ಗುರಿಯನ್ನು ಸುಲಭವಾಗಿ ತಲುಪುತ್ತದೆ. ಇಲ್ಲವಾದರೆ ದಾರಿತಪ್ಪಿ ರಸ್ತೆಯನ್ನು ಬಿಟ್ಟು ಹೊಂಡ ಗುಂಡಿಗಳಿಗೆ ತಲುಪಿ ತೊಂದರೆಗಳಿಗೆ ಈಡಾಗಬೇಕಾಗುತ್ತದೆ. ಪರಿಧಿಗಳು ತುಂಬಾ ಅವಶ್ಯಕ  ಬದುಕಿನ ಗುರಿಯನ್ನು ತಲುಪುವುದಕ್ಕೆ. ಚೌಕಟ್ಟುಗಳ ಅರಿವಿದ್ದಾಗ ಭದ್ರತೆಯ ನಂಬಿಕೆಯಿರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ