ಸ್ಟೇಟಸ್ ಕತೆಗಳು (ಭಾಗ ೪೨೭) - ಮೇಲೊಬ್ಬ

ಸ್ಟೇಟಸ್ ಕತೆಗಳು (ಭಾಗ ೪೨೭) - ಮೇಲೊಬ್ಬ

ಆ ಮನೆಯವರಿಗೆ ರಾತ್ರಿಯಾದರೆ ಸಾಕು ಏನೋ ಕಿರುಚಾಟದ ಶಬ್ದ. ಅದು ಮನುಷ್ಯರದ್ದಲ್ಲ, ಪ್ರಾಣಿಗಳದ್ದು ಅಲ್ಲವೇ ಅಲ್ಲ. ಎದ್ದು ಹೋಗೋ ಧೈರ್ಯವಿಲ್ಲ. ಪ್ರತಿದಿನದ ಶಬ್ದವಲ್ಲ ಆಗಾಗ ಕೇಳಿಬರುತ್ತದೆ. ಒಂದು ಕ್ಷಣ ಎದೆ ಝಲ್ ಎನಿಸುವಂಥ ಶಬ್ದ. ಬಂದ ದಿಕ್ಕಿನ ಅರಿವಿಲ್ಲ. ಪರಿಹಾರಕ್ಕಾಗಿ ಬೇರೆ ಬೇರೆ ಕಡೆ ಬೇರೆ ಬೇರೆ ಪ್ರಯತ್ನಗಳು ನಡೆದರೂ ಸಮಸ್ಯೆಗಳು ಹೆಚ್ಚಾದವು, ತೊಂದರೆಗಳ ಆರಂಭವಾದವು. ಊರಿನ ಪಕ್ಕದ ದೇವಸ್ಥಾನವೊಂದರ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಊರಲ್ಲಿ 300 ವರ್ಷಗಳ ಹಿಂದಿನ ದೇವಾಲಯ ಇರುವುದರ ಸಣ್ಣ ಸುಳಿವು ಸಿಕ್ತು. ದಿಕ್ಕನ್ನು ಅರಸುತ್ತಾ ಹೊರಟವರಿಗೆ ಸಣ್ಣ ಕಲ್ಲೊಂದು ವಿಶೇಷವಾಗಿ ಕಂಡಿತು. ಹಲವು ಊರುಗಳ ಜನ ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದ ಜಾತ್ರೆಯೊಂದು ಕಾಲಗರ್ಭದಲ್ಲಿ ಹೂತು ಹೋಗಿತ್ತು. ಮರಗಿಡಗಳ ನಡುವೆ ಸಿಲುಕಿ ಹೋಗಿತ್ತು .ಮತ್ತೆ ಪುನಶ್ಚೇತನದ ಕಾರ್ಯ ಭವ್ಯವಾದ ಪುಟ್ಟ ಮಂದಿರದ ನಿರ್ಮಾಣ. ಬಿಡಿ ಬಿಡಿ ಆಗಿದ್ದ ಊರುಗಳು ಒಂದಾದವು, ಮನಸ್ಸುಗಳಲ್ಲಿ ಬದಲಾವಣೆಗಳಾದವು. ಶಬ್ದ ನಿಂತಿತು. ತಾಯಿಗೊಂದು ನೆಲೆ ಸಿಕ್ಕಿತು. ನಂಬಿಕೆಗಳು ಮತ್ತೆ ಉಳಿದಿದ್ದಾವೆ. ನಮಗಿಂತ ಮೇಲೊಬ್ಬನಿದ್ದಾನೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ