ಸ್ಟೇಟಸ್ ಕತೆಗಳು (ಭಾಗ ೪೨೯) - ಹೆಣ

ಸ್ಟೇಟಸ್ ಕತೆಗಳು (ಭಾಗ ೪೨೯) - ಹೆಣ

ಹೆಣಗಳಿಗೆ ಬೇಕಾಗಿದೆ. ಕುರ್ಚಿ ಗಟ್ಟಿಮಾಡಿಕೊಳ್ಳಲು, ಅಧಿಕಾರ ಹಿಡಿಯಲು, ದುಡ್ಡು ಮಾಡಲು ಈಗಿನ ಪರಿಸ್ಥಿತಿಯಲ್ಲಿ ಹೆಣ ಅಂದ್ರೆ ಮನೆಯವರ ನೋವಲ್ಲ, ಅನಾಥ ಭಾವವಲ್ಲ, ಸ್ಮಶಾನದ ದಾರಿಯಲ್ಲ, ಅದೊಂದು ಹಣದ ಚೀಲವನ್ನು  ಹೆಚ್ಚಿಸುವ ಮಾಯಾ ಪೆಟ್ಟಿಗೆ. ಹೆಣ ಅಂದ್ರೆ ಕಣ್ಣೀರಲ್ಲ, ನೋವಲ್ಲ, ಕಳೆದುಕೊಂಡ ಭಾವವಲ್ಲ, ಅದೊಂದು ಸ್ವಾರ್ಥ ಲಾಭಕ್ಕಾಗಿ ಹೊರದೇಶಗಳಿಗೆ, ದೂರದೂರುಗಳಿಗೆ ಹೋಗಿ ಐಷಾರಾಮಿಯಾಗಿ ಬದುಕಲು ಟಿಕೆಟ್ ಸಿಗುವ ಸಾರಿಗೆ ವ್ಯವಸ್ಥೆ. ಹೆಣ ಅಂದ್ರೆ ಚಟ್ಟದಲ್ಲಿ ಉರಿಯೋದಲ್ಲ, ಮಣ್ಣಿನಲ್ಲಿ ಹೂಳೋದಲ್ಲ, ಇಳಿದ ರಕ್ತವಲ್ಲ, ನಿಂತ ಉಸಿರು ಅಲ್ಲ, ಅದು ಮಾಧ್ಯಮದವರ ಟಿಆರ್ ಪಿಗೆ, ಮಾತುಗಾರರ ವಾಕ್ ಚಾತುರ್ಯಕ್ಕೆ, ಬರವಣಿಗೆಯ ಪೆನ್ನಿಗೆ ಸಿಕ್ಕ ಸಣ್ಣ ಹುಲ್ಲುಕಡ್ಡಿ. ಹೆಣವೆಂದರೆ ಮೌನವಲ್ಲ, ಬಿಳಿಯ ಬಟ್ಟೆಯಲ್ಲ ಇನ್ನೊಂದಷ್ಟು ಹೆಣಗಳಿಗೆ ಹೊಸ ದಾರಿತೋರಿಸುವ ಆಯುಧ. ಇಂಥ ಹೆಣಗಳಿಗೆ ಕಾಯುವ ರಾಕ್ಷಸರು ಸುತ್ತಮುತ್ತ ಹೆಚ್ಚಾಗಿದ್ದಾರೆ. ದಾರಿಯಲ್ಲಿ ಹೋಗುವಾಗ ಎಡವುವ ಕಲ್ಲನ್ನ ಗಮನಿಸಬಹುದು, ಮುಖವಾಡ ಹಾಕಿದ ರಾಕ್ಷಸರನ್ನ ಹುಡುಕುವುದು ಹೇಗೆ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ